Union Budget 2023 : 5ನೇ ಮತ್ತು ದೇಶದ 75ನೇ ಬಜೆಟ್ ಮಂಡಿಸುತ್ತಿರುವ ನಿರ್ಮಲ ಸೀತರಾಮನ್….
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ 5ನೇ ಮತ್ತು 75ನೇ ಬಜೆಟ್ ಮಂಡಿಸುತ್ತಿದ್ದಾರೆ. ಅಮೃತ ಮಹೋತ್ಸವದ ಮೊದಲ ಬಜೆಟ್ ಇದಾಗಿದ್ದು, ಹಿಂದಿನ ಬಜೆಟ್ನಲ್ಲಿ ಹಾಕಿದ ಅಡಿಪಾಯವನ್ನು ಆಧರಿಸಿದೆ ಎಂದು ಸೀತಾರಾಮನ್ ಹೇಳಿದರು. ಮಹಿಳೆಯರು, ರೈತರು, ಪರಿಶಿಷ್ಟ ಜಾತಿ ಸೇರಿದಂತೆ ಎಲ್ಲರಿಗೂ ಸ್ಥಾನ ಸಿಗುವಂತಹ ಭಾರತ ನಮಗೆ ಬೇಕು ಎಂದು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಕಳೆದ 4 ಬಜೆಟ್ಗಳಿಗಿಂತ ಹೊಸದನ್ನ ತರಲು ಮುಂದಾಗಿದ್ದಾರೆ. ಈ ವರ್ಷ 9 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಿರುವು ಮತ್ತು ಅದಕ್ಕೂ ಮುನ್ನ ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಅದಕ್ಕೂ ಮುನ್ನ ಇದೇ ಕೊನೆಯ ಪೂರ್ಣ ಬಜೆಟ್ ಆಗಿರುವುದರಿಂದ ಕುತೂಹಲ ಹೆಚ್ಚಾಗಿದೆ.
Union Budget 2023: Nirmala Sitharaman presenting the 5th and 75th budget of the country.








