Union Budget 2023 : ಬಜೆಟ್ ನಲ್ಲಿ ಸಪ್ತ ಋಷಿಗಳ ರೀತಿ ಏಳು ಅಂಶಗಳಿಗೆ ಆದ್ಯತೆ….
ಬಜೆಟ್ ನಲ್ಲಿ ಸಪ್ತ ಋಷಿಗಳ ರೀತಿಯಲ್ಲಿ ಏಳು ಅಂಶಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಕೃಷಿಗೆ ಡಿಜಿಟಲ್ ಸರ್ಕಾರಿ ಮೂಲಸೌಕರ್ಯ, ಕೃಷಿ ಕ್ಷೇತ್ರಕ್ಕೆ ಸಾಲ ಸೌಲಭ್ಯ, ಮಾರುಕಟ್ಟೆ ಸೌಲಭ್ಯ, ಕೃಷಿ ಸ್ಟಾರ್ಟ್ ಅಪ್ ಗಳಿಗೆ ನೆರವು ಹಾಗೂ ವಿಶೇಷ ನಿಧಿ ಸ್ಥಾಪಿಸಲಾಗುವುದು ಎಂದರು.
ರೈತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು, ಹತ್ತಿ ಬೆಳೆ ಹೆಚ್ಚಿಸಲು ವಿಶೇಷ ಕ್ರಮ ಕೈಗೊಳ್ಳಲಾಗುವುದು, ಹತ್ತಿಗೆ ವಿಶೇಷ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಅದೇ ರೀತಿ ಆತ್ಮ ನಿರ್ಭರ ಭಾರತ್ ಸ್ವಚ್ಛ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಸಹಾಯ ಹಸ್ತ ನೀಡಲಾಗುವುದು ಎಂದರು. ಕಿರುಧಾನ್ಯ ಬೆಳೆಗಳನ್ನು ಬೆಂಬಲಿಸಲು ಶ್ರೀ ಅನ್ನ ಯೋಜನೆ ಜಾರಿಗೊಳಿಸಲಾಗುವುದು, ಇದರಲ್ಲಿ ರಾಗಿ, ಜೋಳ, ಸಜ್ಜೆ, ಮತ್ತು ಇತರ ಬೆಳೆಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಶ್ರೀಅನ್ನ ಯೋಜನೆಗಾಗಿ ಹೈದರಾಬಾದ್ ಕೇಂದ್ರದಲ್ಲಿ ಸಂಶೋಧನೆ ನಡೆಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
Union Budget 2023: Priority given to seven elements like the saptarishi in the budget…








