ದೇಶದ ಆರ್ಥಿಕ ದಿಕ್ಕು ನಿರ್ಧರಿಸುವ ಕೇಂದ್ರ ಬಜೆಟ್ 2026 ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಇದು ಅವರ ಸತತ ಬಜೆಟ್‌ಗಳಲ್ಲೊಂದು ಆಗಿದ್ದು, ಮಧ್ಯಮ ವರ್ಗ, ತೆರಿಗೆ ಪಾವತಿದಾರರು, ಉದ್ಯಮ ವಲಯ ಹಾಗೂ ಬಡವರ ನಿರೀಕ್ಷೆಗಳು ಈ ಬಾರಿಯ ಬಜೆಟ್ ಮೇಲೆ ಹೆಚ್ಚಾಗಿ ನೆಟ್ಟಿವೆ.
ಈ ಬಜೆಟ್ ಭಾಷಣವನ್ನು ದೇಶದ ಜನರು ನೇರಪ್ರಸಾರ (Live Streaming) ಮೂಲಕ ಸುಲಭವಾಗಿ ವೀಕ್ಷಿಸಬಹುದು.ದೂರದರ್ಶನ, ಪ್ರಮುಖ ರಾಷ್ಟ್ರೀಯ ಸುದ್ದಿವಾಹಿನಿಗಳ ಜೊತೆಗೆ, ಡಿಜಿಟಲ್ ವೀಕ್ಷಕರಿಗಾಗಿ ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳು ಹಾಗೂ ಸರ್ಕಾರದ ಅಧಿಕೃತ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಇರಲಿದೆ.
ಈ ಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆ ಸಡಿಲಿಕೆ, ಮಧ್ಯಮ ವರ್ಗಕ್ಕೆ ರಿಲೀಫ್, ಉದ್ಯಮ ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ, ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆ
ಸಂಬಂಧಿಸಿದ ಘೋಷಣೆಗಳ ಬಗ್ಗೆ ಭಾರೀ ನಿರೀಕ್ಷೆ ವ್ಯಕ್ತವಾಗಿದೆ.
ವಿಶೇಷವಾಗಿ ತೆರಿಗೆ ಪಾವತಿದಾರರು, ಉದ್ಯಮ ವಲಯ, ಯುವಕರು ಹಾಗೂ ಹೂಡಿಕೆದಾರರು ಈ ಬಜೆಟ್‌ನಲ್ಲಿ ಬರುವ ಘೋಷಣೆಗಳನ್ನು ಕುತೂಹಲದಿಂದ ಕಾಯುತ್ತಿದ್ದಾರೆ. ಬಜೆಟ್ ಭಾಷಣದ ಬಳಿಕ ದೇಶದ ಆರ್ಥಿಕ ನೀತಿ ಮತ್ತು ಮುಂದಿನ ಹಣಕಾಸು ವರ್ಷಗಳ ದಿಕ್ಕು ಸ್ಪಷ್ಟವಾಗಲಿದೆ.








