ಕೇಂದ್ರ ಬಜೆಟ್ 2021 : 50 50ಕ್ಕೂ ಹೆಚ್ಚು ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳ..!
ಕೇಂದ್ರ ಬಜೆಟ್ 2021 ಫೆಬ್ರವರಿ 1ರಂದು ಮಂಡನೆಯಾಗಲಿದೆ. ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆಯಾಗಲಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಐತಿಹಾಸಿಕ ಬಜೆಟ್ ಮಂಡಿಸಲಿದ್ದಾರೆ.
ಕೊರೊನಾ ಹಾವಳಿಯ ನಡುವೆ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದ್ದು, ಇದರ ನಡುವೆ ಮಂಡನೆಯಾಗ್ತಿರುವ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳು ಇವೆ. ಈ ಬಾರಿಯ ಬಜೆಟ್ ನಲ್ಲಿ ಯಾವೆಲ್ಲಾ ಕ್ಷೇತ್ರಗಳಲ್ಲಿ ರಿಯಾಯಿತಿ ಸಿಗಲಿದೆ, ಯಾವೆಲ್ಲಾ ವಸ್ತುಗಳ ದುಬಾರಿಯಾಗಲಿದೆ. ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಗಲಿದೆ. ಈ ಎಲ್ಲಾ ಲೆಕ್ಕಾಚಾರಗಳು ಆರಂಭವಾಗಿದೆ. ಇದರ ನಡುವೆ ಮಧ್ಯಮ ವರ್ಗದ ಜನರಿಗೆ ಶಾಕ್ ಆಗಬಹುದು ಎಂಬ ಮಾತು ಕೇಳಿ ಬರುತ್ತಿದೆ. ಯಾಕಂದ್ರೆ ಆರ್ಥಿಕ ವಿಶ್ಲೇಷಕರ ಪ್ರಕಾರ ಕೇಂದ್ರ ಸರ್ಕಾರವು ಸುಮಾರು 50ಕ್ಕೂ ಹೆಚ್ಚು ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಕೊರೊನಾ ಅವಧಿಯಲ್ಲಿ ಲಕ್ಷಾಂತರ ಮಂದಿ ಬೀದಿಗೆ ಬಂದ್ರೂ… ಭಾರತದ 100 ಬಿಲಿಯನೇರ್ ಗಳ ಆದಾಯದಲ್ಲಿ ಭಾರೀ ಏರಿಕೆ..!
ಹೌದು ಸ್ಮಾರ್ಟ್ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳ 50ಕ್ಕೂ ಹೆಚ್ಚು ವಸ್ತುಗಳ ಆಮದು ಸುಂಕವನ್ನು ಶೇಕಡಾ 5ರಿಂದ 10ರಷ್ಟು ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸ್ಮಾರ್ಟ್ ಫೋನ್, ರೆಫ್ರಿಜರೇಟರ್, ಏರ್ ಕಂಡೀಷನರ್, ಎಲೆಕ್ಟ್ರಾನಿಕ್ ಉಪಕರಣಗಳು, ಎಲೆಕ್ಟ್ರಿಕ್ ವಾಹನಗಳು, ಪೀಠೋಪಕರಣಗಳ ಆಮದು ವೆಚ್ಚದಲ್ಲಿ ಏರಿಕೆಯಾಗಲಿದೆ. ಇದರಿಂದ ಭಾರತದಲ್ಲಿ ನೆಲೆಯೂರಿರುವ ಮತ್ತು ನೆಲೆಯೂರಲು ಪ್ರಯತ್ನಿಸುತ್ತಿರುವ ವಿದೇಶಿ ಕಂಪನಿಗಳ ಮಾರುಕಟ್ಟೆ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ಅಷ್ಟೇ ಅಲ್ಲ ಇದರಿಂದಾಗಿ ಮಧ್ಯಮವರ್ಗದ ಖರೀದಾರರಿಗೂ ತೊಂದರೆಯಾಗಬಹುದು ಎನ್ನಲಾಗ್ತಿದೆ. 
ಪ್ರಧಾನಿ ನರೇಂದ್ರ ಮೋದಿಯವರ ಮೇಡ್ ಇನ್ ಇಂಡಿಯಾ ಅಭಿಯಾನವನ್ನು ಬೆಂಬಲಿಸಲು ಹಾಗೂ ದೇಶೀಯ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಆಮದು ಸುಂಕ ಹೆಚ್ಚಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಇದರ ಜೊತೆಗೆ ಆದಾಯ ಹೆಚ್ಚಳದ ಕಡೆಗೂ ಸಹ ಗಮನವನ್ನು ಹರಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








