ಎ.ನಾರಾಯಣಸ್ವಾಮಿಗೆ ಮಂತ್ರಿಪಟ್ಟ ಸಿಕ್ಕಿದ್ದು ಹೇಗೆ..?
ನವದೆಹಲಿ : ಇಂದು ಸಂಜೆ 6 ಗಂಟೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದ್ದು, ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಅದೃಷ್ಠ ಖುಲಾಯಿಸಿದೆ. ಇದೇ ಮೊದಲ ಬಾರಿಗೆ ಆನೇಕಲ್ ನಾರಾಯಣಸ್ವಾಮಿ ಅವರು ಮಂತ್ರಿ ಮಂಡಲ ಸೇರಿಕೊಳ್ಳುತ್ತಿದ್ದಾರೆ.
ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಖಚಿತವಾದ ಹಿನ್ನೆಲೆ ನಾರಾಯಣಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಆಗಮಿಸಿದ್ದರು. ನಿವಾಸದಿಂದ ಹೊರ ಬರುತ್ತಲೇ ಕೇಂದ್ರದ ಸಚಿವನಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ, ಪಕ್ಷ ಅವಕಾಶ ನೀಡಿದೆ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿದೆ ಅನ್ನೋದಕ್ಕೆ ರಾಷ್ಟ್ರಕ್ಕೆ ನಾನೇ ಸಾಕ್ಷಿ ಎಂದು ಭಾವುಕರಾದರು.
ಮಂತ್ರಿಸ್ಥಾನ ಸಿಕ್ಕಿದ್ದು ಹೇಗೆ..?
ಎನ್ ಡಿಎ ಮೊದಲ ಅವಧಿಯಲ್ಲಿ ಮೋದಿ ಸಂಪುಟದಲ್ಲಿ ಸಂಸದ ರಮೇಶ್ ಜಿಗಜಿಣಗಿಗೆ ಸ್ಥಾನ ಕೊಡಲಾಗಿತ್ತು. ಆದ್ರೆ ಎರಡನೇ ಅವಧಿಯಲ್ಲಿ
ಎಸ್ಸಿ ಎಡಗೈ ಸಮುದಾಯದವರಿಗೆ ಸ್ಥಾನವನ್ನ ಕೊಟ್ಟಿರಲಿಲ್ಲ. ಹಾಗಾಗಿ ಆ ಕೋಟಾದಲ್ಲಿ ನಾರಾಯಣಸ್ವಾಮಿಗೆ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದಲ್ಲದೇ ನಾರಾಯಣಸ್ವಾಮಿ ಅವರು ಬಿ.ಎಲ್.ಸಂತೋಷ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು. ಇದು ಕೂಡ ಇವರಿಗೆ ಮಂತ್ರಿ ಸ್ಥಾನ ದೊರಕಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.