ದೇಶದ ಮತ್ತೊಂದು ದೊಡ್ಡ ಆಸ್ತಿ ಸೇಲ್..!?
ನವದೆಹಲಿ : ದೇಶದ ಮತ್ತೊಂದು ದೊಡ್ಡ ಆಸ್ತಿಯನ್ನ ಸೇಲ್ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದು, ಸರ್ಕಾರ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡನ್ನು ಖಾಸಗೀಕರಣ ಮಾಡಿ ಸುಮಾರು 90 ಸಾವಿರ ಕೋಟಿ ಸಂಗ್ರಹಿಸಲು ಎದುರು ನೋಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಬಿಪಿಸಿಎಲ್ ಷೇರುಗಳ ವಹಿವಾಟು ಚುರುಕಾಗಿದ್ದು, ಕೇಂದ್ರ ಸರ್ಕಾರವು ತನ್ನ ಬೆಲೆ ಮಾನದಂಡವಾಗಿ ಸಾರ್ವಜನಿಕ ವ್ಯಾಪಾರ ಮಾಡುವ ಕೆಲವು ಪ್ರತಿಸ್ಪರ್ಧಿಗಳಿಗೆ ನೀಡಲು ಪ್ರಯತ್ನಿಸುತ್ತಿದೆ.
ಅಲ್ಲದೆ ಬಿಪಿಸಿಎಲ್ ನಲ್ಲಿ ತಾನು ಹೊಂದಿರುವ ಶೇ.52.98ರಷ್ಟು ಪಾಲಿಗೆ ನಿರ್ದಿಷ್ಟ ಬೆಲೆ ನಿಗದಿಪಡಿಸಿ ಸುಮಾರು 90,000 ಕೋಟಿ ರೂ. ಸಂಗ್ರಹಿಸುವ ಗುರಿ ಇರಿಸಿಕೊಂಡಿದೆ ಎಂದು ಹೆಸರ ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿ ಹೇಳಿದ್ದಾರೆ.
ಗೋವಾ ಶಿಪ್‌ಯಾರ್ಡ್‌ನಿಂದ 12 ವೇಗದ ಗಸ್ತು ದೋಣಿಗಳನ್ನು ಖರೀದಿಸಲು ಭಾರತೀಯ ಸೇನೆ ನಿರ್ಧಾರ
ಇದಲ್ಲದೆ ಭಾರತದ ಎರಡನೇ ಅತಿದೊಡ್ಡ ಇಂಧನ ಚಿಲ್ಲರೆ ಉದ್ಯಮ ಖರೀದಿಗೆ ವೇದಾಂತ ಗ್ರೂಪ್ ಹೊರತಾಗಿ ಅಮೆರಿಕದ ಎರಡು ಫಂಡ್ ಕಂಪನಿಗಳಾದ ಅಪೋಲೊ ಗ್ಲೋಬಲ್ ಮತ್ತು ಐ ಸ್ಕ್ವೇರ್ ಕ್ಯಾಪಿಟಲ್ ಆಸಕ್ತಿಯ ಅಭಿವ್ಯಕ್ತಿ ಸಲ್ಲಿಸಿವೆ ಎಂದು ವರದಿಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









