ಪಲ್ಸ್ ಪೋಲಿಯೋ ಕಾರ್ಯಕ್ರಮ ಅನಿರ್ದಿಷ್ಟಾವಧಿಗೆ ಮುಂದೂಡಲು ಕೇಂದ್ರ ಸೂಚನೆ ?
ಹೊಸದಿಲ್ಲಿ, ಜನವರಿ11: ಕೊರೋನವೈರಸ್ ಲಸಿಕೆ ಯೋಜನೆಗಳ ನಡುವೆ ರಾಜ್ಯಗಳಲ್ಲಿ ಜನವರಿ 17 ರಂದು ನಿಗದಿಯಾಗಿದ್ದ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ರೋಗ ನಿರೋಧಕ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಮುಂದೂಡಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ ಎಂದು ಹೇಳಲಾಗಿದೆ.
ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಗಮನದಲ್ಲಿಟ್ಟುಕೊಂಡು ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಪೋಲಿಯೊ ನಿರ್ಮೂಲನೆ ಕಾರ್ಯಕ್ರಮದ ಅಂಗವಾಗಿ ಪಲ್ಸ್ ಪೋಲಿಯೊ ರೋಗ ನಿರೋಧಕ ಲಸಿಕೆಯನ್ನು ಜನವರಿ 17 ರಂದು ರಾಜ್ಯಗಳಲ್ಲಿ ನೀಡಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಜನವರಿ 16 ರಿಂದ ಕೋವಿಡ್ ಲಸಿಕೆ ವಿತರಿಸುತ್ತಿರುವುದರಿಂದ ಪೋಲಿಯೊ ಲಸಿಕೆ ವಿತರಣೆಯನ್ನು ಮುಂದೂಡಲು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳನ್ನು ಕೇಳಿಕೊಂಡಿದೆ ಎಂದು ಹೇಳಲಾಗಿದೆ.
ಪೋಲಿಯೊ ರೋಗದ ಮೂರು ದಿನಗಳ ರಾಷ್ಟ್ರೀಯ ರೋಗನಿರೋಧಕ ಚಾಲನೆ ಜನವರಿ 17 ರಿಂದ ದೇಶದಲ್ಲಿ ಪ್ರಾರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಶುಕ್ರವಾರ ಘೋಷಿಸಿದ್ದರು. ಪೋಲಿಯೊ ಲಸಿಕೆಯ ಮೂರು ದಿನಗಳ ರಾಷ್ಟ್ರೀಯ ರೋಗನಿರೋಧಕ ಚಾಲನೆ ಜನವರಿ 17 ರಿಂದ ಪ್ರಾರಂಭವಾಗಲಿದೆ. ನಮ್ಮ ದೇಶದ ಒಟ್ಟಾರೆ ರೋಗನಿರೋಧಕ ಮಟ್ಟವು ವಿಶೇಷವಾಗಿ ಪೋಲಿಯೊಗೆ ಸಂಬಂಧಿಸಿದೆ ಎಂದು ಅವರು ಹೇಳಿದ್ದರು.
ಆಪ್ ಸ್ಟೋರ್ ಉಚಿತ ಅಪ್ಲಿಕೇಶನ್‌ಗಳ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸಿಗ್ನಲ್
ರಾಜ್ಯ ಸರ್ಕಾರಗಳು ಪೋಲಿಯೋ ಲಸಿಕೆ ಕಾರ್ಯಕ್ರಮ ಮುಂದೂಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಸೂಚನೆ ನೀಡಿದೆ. ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲಾ ರಾಜ್ಯಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪತ್ರ ಬರೆದು ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಗಾಗಲೇ ಕೇರಳ ಸರ್ಕಾರ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ರೋಗ ನಿರೋಧಕ ಕಾರ್ಯಕ್ರಮವನ್ನು ಕೇಂದ್ರದ ಸೂಚನೆಯಂತೆ ಮುಂದೂಡಿದೆ. ಪರಿಷ್ಕೃತ ದಿನಾಂಕವನ್ನು ನಂತರ ನೀಡಲಾಗುವುದು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮಾಹಿತಿ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ತೆಂಗಿನ ಎಣ್ಣೆಯ 7 ಉತ್ತಮ ಆರೋಗ್ಯ ಪ್ರಯೋಜನಗಳುhttps://t.co/pfEDWVh3JS
— Saaksha TV (@SaakshaTv) January 10, 2021
ಹ್ಯಾಕರ್‌ಗಳು ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿದರೆ ಅದಕ್ಕೆ ಬ್ಯಾಂಕ್ ಜವಾಬ್ದಾರಿhttps://t.co/9nRC0iZRbH
— Saaksha TV (@SaakshaTv) January 6, 2021