ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತೊಮ್ಮೆ ಆಸ್ಪತ್ರೆಗೆ ದಾಖಲು
ಹೊಸದಿಲ್ಲಿ, ಅಗಸ್ಟ್ 18: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ದೆಹಲಿಯ ಏಮ್ಸ್ ಗೆ ಮಂಗಳವಾರ ದಾಖಲಿಸಲಾಗಿದೆ. ಈ ಮೊದಲು ಆಗಸ್ಟ್ 14 ರಂದು, ಕೊರೋನವೈರಸ್ ನಿಂದ ಅವರು ಚೇತರಿಕೆ ಕಂಡಿದ್ದರು.

ಮೈಕೈ ನೋವು ನೋವು ಮತ್ತು ಆಯಾಸದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ದಾಖಲಿಸಲಾಗಿದೆ. ಏಮ್ಸ್, ಈ ಮಧ್ಯೆ, ಗೃಹ ಸಚಿವರನ್ನು ಪೋಸ್ಟ್ ಕೋವಿಡ್ ಆರೈಕೆಗಾಗಿ ದಾಖಲಿಸಲಾಗಿದೆ ಎಂದು ಹೇಳಿಕೆ ನೀಡಿದೆ.

ಗೌರವಾನ್ವಿತ ಗೃಹ ಸಚಿವ ಶ ಅಮಿತ್ ಶಾ ಅವರು ಕಳೆದ 3-4 ದಿನಗಳಿಂದ ಮೈಕೈ ನೋವು ಮತ್ತು ಆಯಾಸದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಕೋವಿಡ್-19 ಸೋಂಕಿನಿಂದ ಚೇತರಿಕೆ ಕಂಡಿದ್ದು, ಆರೋಗ್ಯವಾಗಿದ್ದಾರೆ ಮತ್ತು ಆಸ್ಪತ್ರೆಯಿಂದ ತಮ್ಮ ಕೆಲಸವನ್ನು ಮುಂದುವರಿಸುತ್ತಿದ್ದಾರೆ ಎಂದು ಏಮ್ಸ್ ಹೇಳಿಕೆಯಲ್ಲಿ ತಿಳಿಸಿದೆ.








