ಕ್ವಾರಂಟೈನ್ ಗೆ ಒಳಗಾದ ಕೇಂದ್ರ ಸಚಿವ ಸಾರಂಗಿ
ಭುವನೇಶ್ವರ, ಜುಲೈ 7: ಒಡಿಶಾ ಶಾಸಕರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಪ್ರತಾಪ್ ಸಾರಂಗಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಸೋಮವಾರ ರಾತ್ರಿ ಸರಣಿ ಟ್ವೀಟ್‌ಗಳಲ್ಲಿ, ಕೇಂದ್ರ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ (ಎಂಎಸ್‌ಎಂಇ) ಅವರು, ಜುಲೈ 2 ಮತ್ತು 3 ರಂದು ನಡೆದ ಎರಡು ಕಾರ್ಯಕ್ರಮಗಳಲ್ಲಿ ಬಾಲಸೋರ್ ಜಿಲ್ಲೆಯ ನೀಲಗಿರಿ ಕ್ಷೇತ್ರದ ಶಾಸಕ ಸುಕಂತ ಕುಮಾರ್ ನಾಯಕ್ ಅವರೊಂದಿಗೆ ಭಾಗವಹಿಸಿದ್ದ ಹಿನ್ನಲೆಯಲ್ಲಿ ತಾನು ಹೋಂ ಕ್ವಾರೆಂಟೈನ್ ಗೆ ಒಳಗಾಗುವುದಾಗಿ ಎಂದು ಮಾಹಿತಿ ನೀಡಿದ್ದಾರೆ.
ಶಾಸಕ ನೀಲಗಿರಿ ಅವರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನಲೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ದೆಹಲಿಯ ನನ್ನ ಅಧಿಕೃತ ನಿವಾಸದಲ್ಲಿ ನಾನು ಸ್ವಯಂ ನಿರ್ಬಂಧವನ್ನು ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ.
ಸುಕಂತ ಕುಮಾರ್ ನಾಯಕ್ ಅವರಿಗೆ ಸೋಮವಾರ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಅವರು ಕೊರೊನಾ ಸೋಂಕು ಕಾಣಿಸಿಕೊಂಡ ಒಡಿಶಾದ ಮೊದಲ ಶಾಸಕರಾಗಿದ್ದಾರೆ








