Oil price | ತೈಲ ಬೆಲೆ ಏರಿಕೆ ಮುನ್ಸೂಚನೆ ಕೊಟ್ಟ ಕೇಂದ್ರ ಸಚಿವ
‘ಪೆಟ್ರೋಲಿಯಂ ಕಂಪನಿಗಳು ತೈಲ ದರ ನಿರ್ಧರಿಸಲಿವೆ
ಪೆಟ್ರೋಲಿಯಂ ಸಚಿವ ಹರ್ದೀಪ್ ಪುರಿ ಮಹತ್ವದ ಹೇಳಿಕೆ
ನಾವು ತೈಲದ ಕೊರತೆಗೆ ಅವಕಾಶ ನೀಡುವುದಿಲ್ಲ
ಪೆಟ್ರೋಲ್ ಪ್ರತಿ ಲೀಟರ್ʼಗೆ 15ರೂ. ಹೆಚ್ಚಳ ಸಾಧ್ಯತೆ
ನವದೆಹಲಿ : ಪಂಚ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ದೇಶದಾದ್ಯಂತ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾಗಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು.
ಅದಕ್ಕೆ ಪುಷ್ಠಿ ನೀಡುವಂತೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದಿಪ್ ಪುರಿ, ತೈಲ ಬೆಲೆ ಹೆಚ್ಚಳದ ಸುಳಿವು ಕೊಟ್ಟಿದ್ದಾರೆ.
‘ಪೆಟ್ರೋಲಿಯಂ ಕಂಪನಿಗಳು ತೈಲ ದರದ ಬಗ್ಗೆ ನಿರ್ಧರಿಸಲಿವೆ. ತೈಲವನ್ನ ಯುಪಿಎ ಸರ್ಕಾರ ನಿಯಂತ್ರಣ ಮುಕ್ತಗೊಳಿಸಿದೆ.
ಆದರೆ, ನಾವು ತೈಲದ ಕೊರತೆಗೆ ಅವಕಾಶ ನೀಡುವುದಿಲ್ಲ. ಭಾರತ ಶೇಕಡಾ 80ರಷ್ಟು ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ.
ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿದ್ದು, ತೈಲದ ಬೆಲೆ ಅಂತರರಾಷ್ಟ್ರೀಯ ಪರಿಸ್ಥಿತಿಗಳನ್ನ ಅವಲಂಬಿಸಿದೆ ಎಂದು ಹೇಳುವ ಮೂಲಕ ತೈಲ ಬೆಲೆ ಹೆಚ್ಚಾಗುವ ಸುಳಿವು ನೀಡಿದ್ದಾರೆ.
ಮೂಲಗಳ ಪ್ರಕಾರ ದೇಶದಲ್ಲಿ ಇನ್ನೇನು ಕೇವಲವೇ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ʼಗೆ 15ರೂ.ಗಳಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.









