ಅನನ್ಯ ಮತ್ತು ಅಪರೂಪದ ಹಳದಿ ಆಮೆ
ಬಾಲಸೋರ್, ಜುಲೈ 20: ಅನನ್ಯ ಮತ್ತು ಅಪರೂಪದ ಹಳದಿ ಆಮೆ ಭಾನುವಾರ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಆಮೆ ಪತ್ತೆಯಾದ ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದು ಆಮೆಯನ್ನು ಅವರಿಗೆ ಹಸ್ತಾಂತರಿಸಿದರು.
ವನ್ಯಜೀವಿ ವಾರ್ಡನ್ ಭನೂಮಿತ್ರ ಆಚಾರ್ಯ ಅವರು ಹಳದಿ ಆಮೆಯ ಬಗ್ಗೆ ಮಾತನಾಡಿದ್ದು, ಇದು ಒಂದು ಅನನ್ಯ ಶೋಧವಾಗಿದೆ ಮತ್ತು ಈ ಮೊದಲು ಈ ರೀತಿಯ ಆಮೆಯನ್ನು ನೋಡಿಲ್ಲ ಎಂದು ಹೇಳಿದರು.

ಆಮೆಯ ಸಂಪೂರ್ಣ ಕವಚ ಮತ್ತು ದೇಹವು ಹಳದಿಯಾಗಿದ್ದು, ಇದು ಅಪರೂಪದ ಆಮೆ ಎಂದು ಆಚಾರ್ಯ ಹೇಳಿದ್ದಾರೆ.
ಐ.ಎಫ್.ಎಸ್ ಅಧಿಕಾರಿಯೊಬ್ಬರು ಇದು ಅಲ್ಬಿನೋ ಆಮೆ ಇರಬಹುದೆಂದು ಊಹಿಸಿದ್ದಾರೆ ಮತ್ತು ಕೆಲವು ವರ್ಷಗಳ ಹಿಂದೆ ಸಿಂಧ್ ನಲ್ಲಿ ಇಂತಹ ಶೋಧನೆಯ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ.
ಬಹುಶಃ ಇದು ಅಲ್ಬಿನೋ ಆಗಿರಬಹುದು. ಕೆಲವು ವರ್ಷಗಳ ಹಿಂದೆ ಸಿಂಧ್‌ನ ಸ್ಥಳೀಯರು ಇಂತಹ ಒಂದು ಪ್ರಕರಣವನ್ನು ಶೋಧಿಸಿದ್ದಾರೆ ಎಂದು ಐಎಫ್‌ಎಸ್ (ಭಾರತೀಯ ಅರಣ್ಯ ಸೇವೆಗಳು) ಅಧಿಕಾರಿ ಸುಸಂತಾ ನಂದಾ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಕಳೆದ ತಿಂಗಳು ಸಹ, ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಡಿಯುಲಿ ಅಣೆಕಟ್ಟಿನಲ್ಲಿ ಅಪರೂಪದ ಜಾತಿಯ ಟ್ರಯೊನಿಚಿಡೆ ಆಮೆ ಮೀನುಗಾರರಿಂದ ಹಿಡಿಯಲ್ಪಟ್ಟಿತು ಮತ್ತು ನಂತರ ಅದನ್ನು ಅರಣ್ಯ ಇಲಾಖೆಯು ಡಿಯುಲಿ ಅಣೆಕಟ್ಟಿನಲ್ಲಿ ಬಿಡುಗಡೆ ಮಾಡಿತು. ಟ್ರಯೋನಿಚಿಡೆ ಆಮೆಗಳು ಸಾಫ್ಟ್‌ಶೆಲ್ ಆಮೆಗಳಾಗಿವೆ, ಅವು ಆಫ್ರಿಕಾ, ಏಷ್ಯಾ ಮತ್ತು ಉತ್ತರ ಅಮೆರಿಕಾದಲ್ಲಿ ಕಂಡುಬರುತ್ತವೆ. ಅರಣ್ಯ ಇಲಾಖೆಯ ಪ್ರಕಾರ, ಆಮೆ 30 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವಿದೆ ಮತ್ತು ಅದರ ಗರಿಷ್ಠ ಜೀವನವು 50 ವರ್ಷಗಳು.








