ಜಿನಿವಾ, ಜೂನ್ 1: ವಿಶ್ವಸಂಸ್ಥೆಯು ಜೂನ್ 17 ರಂದು ಹೊಸ ಮತದಾನ ವ್ಯವಸ್ಥೆಯಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ತಾತ್ಕಾಲಿಕ ಸದಸ್ಯತ್ವಕ್ಕಾಗಿ ಚುನಾವಣೆ ನಡೆಸಲು ನಿರ್ಧರಿಸಿದ್ದು ಭಾರತಕ್ಕೆ ಗೆಲುವು ನಿಚ್ಚಳವಾಗಿದೆ.
ಏಷ್ಯಾ ಪೆಸಿಫಿಕ್ ವಲಯದ ಸ್ಥಾನಕ್ಕೆ ಭಾರತ ಮಾತ್ರ ಸ್ಪರ್ಧಿಯಾಗಿರುವ ಹಿನ್ನಲೆಯಲ್ಲಿ ಚುನಾವಣೆ ಕೇವಲ ಔಪಚಾರಿಕ ಪ್ರಕ್ರಿಯೆಯಾಗಿದೆ.
ಕೊನೆಯ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ವಿಶ್ವಸಂಸ್ಥೆ ಚುನಾವಣೆಗೆ ವಿಶೇಷ ವ್ಯವಸ್ಥೆ ಮಾಡುತ್ತಿದ್ದು, ಈ ಸಂಬಂಧ 193 ಸದಸ್ಯ ದೇಶಗಳ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆಯ ಕುರಿತು ವಿಶೇಷ ನಿರ್ಣಯ ಅಂಗೀಕರಿಸಿದೆ. ಸಭೆಯಲ್ಲಿ ಕೊರೋನಾ ಸೋಂಕಿನ ಈ ಸಮಯದಲ್ಲಿ ರಹಸ್ಯ ಮತದಾನದ ಮೂಲಕ ಚುನಾವಣೆ ನಡೆಸುವ ವಿಧಾನ ಎನ್ನುವ ಶೀರ್ಷಿಕೆಯನ್ನು ಅಂಗೀಕರಿಸಿತು.
ಕಳೆದ ವರ್ಷ ಜೂನ್ ನಲ್ಲಿ 2021-22ರ ಅವಧಿಗೆ ಭಾರತದ ನಾಮ ನಿರ್ದೇಶನವನ್ನು ಚೀನಾ, ಪಾಕಿಸ್ತಾನ ಸೇರಿ ಏಷ್ಯಾ ಫೆಸಿಫಿಕ್ ಗುಂಪಿನ 55 ಸದಸ್ಯ ದೇಶಗಳು ಬೆಂಬಲಿಸಿದ್ದವು. 2011-12ರಲ್ಲಿ ಭಾರತ ಕೊನೆಯ ಬಾರಿಗೆ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ದೇಶವಾಗಿ ಸೇವೆ ಸಲ್ಲಿಸಿತ್ತು.