ದೆಹಲಿ : ನಾಳೆಯಿಂದ ಎಲ್ಲ ಅಂಗಡಿ ಮುಗ್ಗಟ್ಟುಗಳು, ಮಾಲ್ ಓಪನ್
ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜ್ಯದಾದ್ಯಂತ ಲಾಕ್ ಡೌನ್ ಅನ್ನ ಮತ್ತಷ್ಟು ಸಡಿಲಗೊಳಿಸಿದ್ದಾರೆ.
ನಾಳೆಯಿಂದ ಎಲ್ಲ ಅಂಗಡಿ ಮುಗ್ಗಟ್ಟುಗಳು ಹಾಗೂ ಮಾಲ್ಗ ಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ.
ನಾಳೆ ಬೆಳಗ್ಗೆ 5 ಗಂಟೆಯಿಂದಲೇ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಲಿದ್ದು, ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಲು ಅನುಮತಿ ಇದೆ.
ಮಾರುಕಟ್ಟೆ ಹಾಗೂ ಮಾಲ್ ಗಳನ್ನು ಸಹ ತೆರೆಯಲು ಅವಕಾಶವಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಜೊತೆಗೆ ಒಂದು ವಾರದ ಕಾಲ ಮಾರುಕಟ್ಟೆ ಹಾಗೂ ಮಾಲ್ ಗಳನ್ನು ತೆರೆಯಲು ಅವಕಾಶ ನೀಡಿಲಾಗುವುದು.
ಈ ಅವಧಿಯಲ್ಲಿ ಸೋಂಕು ಹೆಚ್ಚಾದರೇ ಮತ್ತೆ ಲಾಕ್ ಡೌನ್ ಮಾಡಲಾಗುವುದು. ಇಲ್ಲವಾದರೆ ಅನ್ ಲಾಕ್ ಮುಂದುವರಿಯಲಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಇನ್ನು ಎಲ್ಲ ಹೋಟೆಲ್ ಗಳು ಸಂಪೂರ್ಣವಾಗಿ ಬಾಗಿಲು ತೆರೆಯಲು ಅನುಮತಿ ನೀಡಲಾಗಿದೆ ಆದರೂ ಶೇ. 50 ಆಸನ ಭರ್ತಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.