ಬೆಂಗಳೂರು: ನಾಳೆಯಿಂದ ಬೆಂಗಳೂರು ನಗರ ಹಾಗೂ ಗ್ರಾಮಂತರ ಜಿಲ್ಲೆಗಳಲ್ಲಿ ಲಾಕ್‍ಡೌನ್ ಅನ್‍ಲಾಕ್ ಆಗುತ್ತಿದ್ದರೂ, ಕೆಲ ನಿರ್ಬಂಧಗಳನ್ನು ಮುಂದುವರೆಸಲು ಬಿಬಿಎಂಪಿ ನಿರ್ಧರಿಸಿದೆ.
ನಾಳೆಯಿಂದ ಮುಂದಿನ ಆದೇಶದವರೆಗೆ ಜನಸಂದಣಿ ಹೆಚ್ಚಿರುವ ಕೆ.ಆರ್ ಮಾರುಕಟ್ಟೆ ಹಾಗೂ ಈಗಾಗಲೇ ಸೀಲ್‍ಡೌನ್ ಮಾಡಿರುವ ಮಾರುಕಟ್ಟೆಗಳನ್ನು ತೆರೆಯದೇ ಇರಲು ತೀರ್ಮಾನಿಸಲಾಗಿದೆ. ಮಾರುಕಟ್ಟೆಗಳಲ್ಲಿ ಮುಂಜಾಗ್ರತೆಗಳನ್ನು ಕೈಗೊಂಡ ಬಳಿಕ ಮುಂದೆ ಓಪನ್ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಹಾಗೇಯೇ ನಾಳೆಯಿಂದ ಜಿಮ್, ಸ್ವಿಮ್ಮಿಂಗ್ ಪೂಲ್, ಜಿಮ್, ಬಾರ್ ಅಂಡ್ ರೆಸ್ಟೋರೆಂಟ್‍ಗಳನ್ನು ತೆರೆಯಲು ಅವಕಾಶ ಇಲ್ಲ. ಹಂತ ಹಂತವಾಗಿ ಇವುಗಳನ್ನು ತೆರೆಯಲು ಅವಕಾಶ ನೀಡಲಾಗುವುದು. ಜನ ದಟ್ಟಣೆ ಒಂದೇ ಕಡೆ ಸೇರುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಲಾಗುತ್ತಿದೆ. ಇದರಿಂದ ಬೇಗ ರಿಸಲ್ಟ್ ಸಿಗುತ್ತಿದೆ. ಈಗಾಗಲೇ 25 ಸಾವಿರ ಅಂಟಿಜೆನ್ ಟೆಸ್ಟ್ ಮಾಡಲಾಗಿದೆ. ನಮ್ಮ ಬಳಿ 50 ಸಾವಿರ ಅಂಟಿಜೆನ್ ಕಿಟ್‍ಗಳು ಲಭ್ಯವಿದ್ದು, ಇನ್ನಷ್ಟು ಬೇಕು ಎಂದು ಸರ್ಕಾರವನ್ನು ಕೇಳಿದ್ದೇವೆ ಎಂದು ಮಂಜುನಾಥ್ ಪ್ರಸಾದ್ ವಿವರ ನೀಡಿದರು.