ಬಿಗ್ ಬ್ಯಾಷ್ ನಲ್ಲಿ ಆಡಲಿದ್ದಾರೆ ಉನ್ಮುಕ್ತ್ ಚಾಂದ್
ಮೆಲ್ಬೋರ್ನ್ : ಆಸ್ಟ್ರೇಲಿಯಾದ ಟಿ20 ಲೀಗ್ ಆದ ಬಿಗ್ ಬ್ಯಾಷ್ ನಲ್ಲಿ ಭಾರತೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದ 2012ರ ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕ ಉನ್ಮುಕ್ತ್ ಚಾಂದ್ ಆಡಲಿದ್ದಾರೆ.
ಉನ್ಮುಕ್ತ್ ಚಾಂದ್ ಬಿಗ್ ಬ್ಯಾಷ್ ಲೀಗ್ ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡಲಿದ್ದಾರೆ.
ಅಂದಹಾಗೇ ಈ ಲೀಗ್ ನಲ್ಲಿ ಆಡಲಿರುವ ಭಾರತದ ಮೊದಲ ಕ್ರಿಕೆಟಿಗ ಉನ್ಮುಕ್ತ್ ಚಾಂದ್ ಆಗಿದ್ದಾರೆ.
ಈಗಾಗಲೇ ಭಾರತ ಮಹಿಳಾ ತಂಡದ ಸ್ಟಾರ್ ಗಳಾದ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜಮೀಮಾ ರೋಡ್ರಿಗಸ್ ಸೇರಿದಂತೆ 8 ಮಂದಿ ಬಿಬಿಸಿ ಲೀಗ್ ನಲ್ಲಿ ಆಡುತ್ತಿದ್ದಾರೆ.
ಭಾರತೀಯ ಕ್ರಿಕೆಟ್ ನಲ್ಲಿ ಸೂಕ್ತ ಅವಕಾಶ ಸಿಗದ ಕಾರಣ ಉನ್ಮುಕ್ತ್ ಚಾಂದ್, ಭಾರತೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.
ಭಾರತಕ್ಕೆ ಕಿರಿಯರ ವಿಶ್ವಕಪ್ ಗೆದ್ದುಕೊಟ್ಟಿದ್ದ ವಿರಾಟ್ ಕೊಹ್ಲಿ, ಪೃಥ್ವಿ ಶಾ ಅವರಂತೆ ಚಾಂದ್ ಭಾರತೀಯ ಕ್ರಿಕೆಟ್ ನಲ್ಲಿ ಮಿಂಚುವಲ್ಲಿ ವಿಫಲರಾಗಿದ್ದರು.