ಶ್ರೀ ಚನ್ನಕೇಶವ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿದ್ದು, ಪಟ್ಟಣದ ಮಧ್ಯಭಾಗದಲ್ಲಿರುತ್ತದೆ. ಈ ದೇವಾಲಯವು 600 ವರ್ಷಗಳಷ್ಟು ಇತಿಹಾಸ ಹೊಂದಿರುತ್ತದೆ.
ಹೊಯ್ಸಳ ಮುಮ್ಮಡಿ ಬಲ್ಲಾಳರ ವಂಶಜರು ಸುಳ್ಯದ ಪನ್ನೆಬೀಡಿನಲ್ಲಿ ನೆಲೆಸಿದ್ದು, ತಮಗೆ ದೊರೆತ ಪಂಚಲೋಹದ ಶ್ರೀ ಚನ್ನಕೇಶವ ದೇವರ ವಿಗ್ರಹವನ್ನು ಗುಡಿ ಕಟ್ಟಿ ಪೂಜಿಸಲು ನಿರ್ಧರಿಸಿ ಅದಕ್ಕಾಗಿ ಸ್ಥಳ ಹುಡಕಾಟದಲ್ಲಿದ್ದಾಗ ದನ ಮತ್ತು ಹುಲಿ ಅನ್ಯೋನ್ಯವಾಗಿದ್ದ ವಿಸ್ಮಯಕಾರಿ ಸ್ಥಳ ಕಂಡು ಅಲ್ಲಿ ಚನ್ನಕೇಶವನನ್ನು ನಿರ್ಮಿಸಿರುತ್ತಾರೆಂದು ಐತಿಹ್ಯ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಶ್ರೀ ಚನ್ನಕೇಶವ ದೇವರ ಮೂರ್ತಿ ಶಂಖ, ಚಕ್ರ ಗಧಾ ಮತ್ತು ಪದ್ಮಧಾರಿಯಾಗಿದ್ದು, ದೇವಳದ ಒಳಗೋಪುರದಲ್ಲಿ ದೇವಾಲಯ ಸ್ಥಾಪನೆ ಮಾಡಿದ ಚೆನ್ನಿಗರಾಯ ಬಲ್ಲಾಳರ ಆಶ್ವಾರೋಹಿ ಮೂರ್ತಿ ಇದೆ. ಈಶಾನ್ಯ ಭಾಗದಲ್ಲಿ ಆನಂತರ ಸ್ಥಾಪಿಸಿದ ಶ್ರೀ ದುರ್ಗಾದೇವಿಯ ಮೂರ್ತಿ ಇದೆ. ದೇವಾಲಯದ ಹೊರಗೋಪುರದ ವಾಯುವ್ಯ ಭಾಗದಲ್ಲಿ ಶ್ರೀ ಅಂಜನೇಯನ ಗುಡಿ ಇದೆ. ದೇವಾಲಯದ ಹೊರಗಡೆ ಪಡುಭಾಗದಲ್ಲಿ ದೇವಾಲಯಕ್ಕಿಂತಲೂ ಪ್ರಾಚೀನವಾದ ಸ್ಥಳ ಸಾನಿಧ್ಯಗಳಾದ ರಕ್ತೇಶ್ವರಿ, ಗುಳಿಗ ಹಾಗೂ ನಾಗಬನಗಳಿವೆ, ಸ್ವಾಮಿ ಪ್ರಸನ್ನವದನನಾಗಿ ಭಕ್ತರ ಆಭೀಷ್ಠೆಗಳನ್ನು ಈಡೇರಿಸಿಕೊಂಡು ಬರುತ್ತಿದ್ದಾರೆ.
ಜನವರಿ ಮಾಹೆಯಲ್ಲಿ ಸುಮಾರು 10 ದಿನಗಳ ಕಾಲ ಈ ದೇವರ ಜಾತ್ರೆಯು ಈ ದೇವಾಲಯದ ರೂಢೀ ಸಂಪ್ರದಾಯದಂತೆ ವೈಭವದಿಂದ ನೆರವೇರುತ್ತದೆ. ಈ ದೇವಾಲಯಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ವಿಶೇಷ ದೈವಗಳು ದೇವಾಲಯಕ್ಕೆ ಬಂದು ಶ್ರೀ ದೇವರು ಮತ್ತು ದೈವಗಳ ಭೇಟಿಯಾಗಿ ವಿಜೃಂಭಣೆಯ ಉತ್ಸವವು ನಡೆಯುತ್ತದೆ. ಈ ಸಂದರ್ಭದಲ್ಲಿ ಅಸಂಖ್ಯಾತ ಸಾರ್ವಜನಿಕ ಭಕ್ತಾಧಿಗಳು ದೇವಾಲಯಕ್ಕೆ ಬಂದು ಹರಕೆ ಕಾಣಿಕೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಬಾಗಿಲು ತೆರೆಯುವ ಸಮಯ
06:00 AM IST – 01:00 PM IST
04:00 PM IST – 08:30 PM IST
ಬಾಗಿಲು ಮುಚ್ಚುವ ಸಮಯ
08:30 PM IST – 05:30 AM IST








