ಲವ್ ಜಿಹಾದ್ ಕೊನೆಗೊಳಿಸಿ ಅಥವಾ ನಿಮ್ಮ ಕೊನೆಯ ಪ್ರಯಾಣಕ್ಕೆ ಸಿದ್ಧರಾಗಿ – ಯೋಗಿ ಆದಿತ್ಯನಾಥ್ ಎಚ್ಚರಿಕೆ End love jihad
ಲಕ್ನೋ, ನವೆಂಬರ್01: ವಿವಾಹಕ್ಕಾಗಿ ಧಾರ್ಮಿಕ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಇತ್ತೀಚಿಗೆ ತೀರ್ಪನ್ನು ನೀಡಿದೆ.
ಈ ತೀರ್ಪನ್ನು ಉಲ್ಲೇಖಿಸಿ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲವ್ ಜಿಹಾದ್ ನಡೆಸುತ್ತಿರುವವರಿಗೆ ತಮ್ಮ ಮಾರ್ಗಗಳನ್ನು ಸರಿಪಡಿಸಲು ಅವಕಾಶ ನೀಡಿದ್ದು, ಇಲ್ಲದಿದ್ದರೆ ಕೊನೆಯ ಪ್ರಯಾಣಕ್ಕೆ ಸಿದ್ಧರಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ. End love jihad
ನವೆಂಬರ್ 3 ರಂದು ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯಲಿರುವ ಮಲ್ಹಾನಿ (ಜಾನ್‌ಪುರ) ದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಅಲಹಾಬಾದ್ ಹೈಕೋರ್ಟ್ ಮದುವೆಗೆ ಧಾರ್ಮಿಕ ಮತಾಂತರ ಅಗತ್ಯವಿಲ್ಲ ಎಂದು ತೀರ್ಪು ನೀಡಿದೆ. ಮತಾಂತರ ಮಾಡಬಾರದು, ಅದನ್ನು ಸ್ವೀಕರಿಸಬಾರದು ಅಥವಾ ಗುರುತಿಸಬಾರದು.
65ನೇ ಕನ್ನಡ ರಾಜ್ಯೋತ್ಸವ : ಕನ್ನಡದಲ್ಲಿ ಟ್ವೀಟ್ ಮಾಡಿ ಜನತೆಗೆ ಶುಭಕೋರಿದ ಪ್ರಧಾನಿ ಮೋದಿ
ಲವ್ ಜಿಹಾದ್ ಅಂತ್ಯಗೊಳಿಸಲು ಸರ್ಕಾರ ಕೂಡ ಕಠಿಣ ಕ್ರಮಗಳನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿದೆ ಎಂದು ಅವರು ಹೇಳಿದರು.
#WATCH Allahabad HC said religious conversion isn't necessary for marriage. Govt will also work to curb 'Love-Jihad', we'll make a law. I warn those who conceal identity & play with our sisters' respect, if you don't mend your ways your 'Ram naam satya' journey will begin: UP CM pic.twitter.com/7Ddhz15inS
— ANI UP/Uttarakhand (@ANINewsUP) October 31, 2020
ನಿಮ್ಮ ಮಾರ್ಗಗಳನ್ನು ಸರಿಪಡಿಸಿ ಅಥವಾ ಕೊನೆಯ ಪ್ರಯಾಣಕ್ಕೆ ಸಿದ್ಧರಾಗಿರಿ. ಗುರುತನ್ನು ಮರೆಮಾಚಿಕೊಂಡು ನಮ್ಮ ಸಹೋದರಿಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಮೋಸ ಮಾಡುತ್ತಿರುವವರಿಗೆ ಇದು ಎಚ್ಚರಿಕೆ ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.
ನಾವು ಮಿಷನ್ ಶಕ್ತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಗೆ, ಪ್ರತಿಯೊಬ್ಬ ಸಹೋದರಿಗೆ ಭದ್ರತೆಯನ್ನು ಖಾತರಿಪಡಿಸುವುದು ಇದರ ಉದ್ದೇಶವಾಗಿದೆ. ಯಾರಾದರೂ ತಪ್ಪು ಕಾರ್ಯವನ್ನು ಮಾಡಿದರೆ, ಆಪರೇಷನ್ ಶಕ್ತಿ ಸಿದ್ಧವಾಗಿದೆ. ಸಹೋದರಿಯರು ಹಾಗೂ ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಗೌರವವನ್ನು ಖಚಿತಪಡಿಸುವುದು ಆಪರೇಷನ್ ಶಕ್ತಿಯ ಉದ್ದೇಶವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಆಗಸ್ಟ್ನಲ್ಲಿ, ಆದಿತ್ಯನಾಥ್ ಅವರು ರಾಜ್ಯ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಲವ್ ಜಿಹಾದ್ ಘಟನೆಗಳನ್ನು ತಡೆಯುವ ಯೋಜನೆಯನ್ನು ಸಿದ್ಧಪಡಿಸುವಂತೆ ನಿರ್ದೇಶಿಸಿದ್ದರು. ತಂತ್ರವನ್ನು ಸಿದ್ಧಪಡಿಸಲು ಮತ್ತು ಹೊಸ ಕಾನೂನು ಅಗತ್ಯವಿದೆಯೇ ಎಂದು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ