UP Earthquake : ಉತ್ತರ ಪ್ರದೇಶದಲ್ಲಿ ಕಂಪಿಸಿದ ಭೂಮಿ – 5.2 ತೀವ್ರತೆ ದಾಖಲು..
ಶನಿವಾರ ಮತ್ತು ಶುಕ್ರವಾರದ ಮಧ್ಯರಾತ್ರಿ ಉತ್ತರಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಲಕ್ನೋದ ಉತ್ತರ-ಈಶಾನ್ಯಕ್ಕೆ 139 ಕಿ.ಮೀ ದೂರದಲ್ಲಿ ನಸುಕಿನ 1.12 ರ ಸುಮಾರಿಗೆ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಮಾಹಿತಿ ನೀಡಿದೆ. ಭೂಕಂಪದ ಆಳವ ನೆಲದಿಂದ 82 ಕಿ.ಮೀ. ಆಳದದಲ್ಲಿದೆ.
“20-08-2022 ರಂದು 5.2 ತೀವ್ರತೆಯ ಭೂಕಂಪ ಸಂಭವಿಸಿದೆ, 01:12:47 IST, ಲ್ಯಾಟ್: 28.07 ಮತ್ತು ಉದ್ದ: 81.25, ಆಳ: 82 ಕಿಮೀ, ಸ್ಥಳ: 139 ಕಿಮೀ ಎನ್ಎನ್ಇ ಲಕ್ನೋ, ಉತ್ತರ ಪ್ರದೇಶ” ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದೆ.
ಭಾರತ-ನೇಪಾಳ ಗಡಿಗೆ ಸಮೀಪವಿರುವ ಉತ್ತರ ಪ್ರದೇಶದ ಬಹರೈಚ್ ಬಳಿ ಭೂಕಂಪನದ ಕೇಂದ್ರ ಬಿಂದುವಾಗಿತ್ತು. ಯಾವುದೇ ಹಾನಿ ವರದಿಯಾಗಿಲ್ಲವಾದರೂ, ಲಖಿಂಪುರಖೇರಿಯಿಂದ ಸಿಸಿಟಿವಿ ದೃಶ್ಯಾವಳಿಯಲ್ಲಿ ಭೂಕಂಪದ ದೃಶ್ಯಗಳು ಕಂಡುಬಂದಿದೆ.