UP Election: ನಾವು ಮತ್ತೆ ಅಧಿಕಾರಕ್ಕೆ ಬಂದರೆ, ಇಂದು ಕೈಯಲ್ಲಿ ಅಭಿವೃದ್ದಿ ಕೋಲು ಇನ್ನೊಂದು ಕೈಯಲ್ಲಿ ಬುಲ್ಡೋಜರ್ ಸ್ಟಿಯರಿಂಗ್ ಇರುತ್ತದೆ. ಯೋಗಿ ಆದಿತ್ಯನಾಥ್
ಅಯೋಧ್ಯೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾದರೆ ಒಂದು ಕೈಯಲ್ಲಿ ಅಭಿವೃದ್ಧಿ ಕೋಲು, ಇನ್ನೊಂದು ಕೈಯಲ್ಲಿ ಬುಲ್ಡೋಜರ್ ಇರುತ್ತದೆ. ರಾಜ್ಯ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವ ಜತೆಗೆ ಮಾಫಿಯಾ, ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಂದರು.
ಸಮಾಜಾವಾದಿ ಪಕ್ಷವನ್ನ ಗುರಿಯಾಗಿಸಿ ಮಾತನಾಡಿದ ಅವರು, ಎಸ್ಪಿ ಭಯೋತ್ಪಾದಕರ ಜೊತೆಗಿದ್ದಾರೆ. ಅವರಿಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ರಾಮರಾಜ್ಯ ಸ್ಥಾಪನೆಗೆ ಶ್ರಮಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸದೃಢ ಮತ್ತು ಸ್ಥಿರ ಸರ್ಕಾರ ನೀಡಲಿದೆ. ಎಂದರು.
ಐನೂರು ವರ್ಷಗಳ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಹೇಳಿದ್ದಾರೆ. ಬಿಎಸ್‌ಪಿ ಈ ಕೆಲಸ ಮಾಡಿರಬಹುದೇ? ಕಾಂಗ್ರೆಸ್‌ಗೆ ಮಂದಿರ ನಿರ್ಮಾಣವಾಗಬಹುದೇ ಅಥವಾ ರಾಮಭಕ್ತರ ಮೇಲೆ ಗುಂಡು ಹಾರಿಸಿದ ಎಸ್‌ಪಿಯವರಿಂದ ಮಂದಿರ ನಿರ್ಮಾಣವಾಗಬಹುದೇ? ಡಬಲ್ ಇಂಜಿನ್ ಸರ್ಕಾರ ಮಾತ್ರ ರಾಮಮಂದಿರ ನಿರ್ಮಾಣ ಮಾಡುತ್ತಿದೆ. ಎಂದು ಅಯೋಧ್ಯೆಯಲ್ಲಿ ಯೋಗಿ ಹೇಳಿದ್ದಾರೆ.








