UP Election – ಮೊದಲ ಹಂತದ ಮತದಾರರ ಕ್ಷಮೆ ಯಾಚಿಸಿದ ಮೋದಿ…
ಉತ್ತರಪ್ರದೇಶದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಮೋದಿ ಇನ್ನೊಂದು ಕಡೆ ಚುನಾವಣಾ ಸಹರಾನ್ಪುರದಲ್ಲಿ ಬೃಹತ್ ರ್ಯಾಲಿಯನ್ನ ಉದ್ದೇಶಿಸಿ ಮಾತನಾಡಿದ್ದಾರೆ. ಮೊದಲ ಹಂತದಲ್ಲಿ ಮತದಾನ ಮಾಡುತ್ತಿರುವ ಜನತೆಯ ಕ್ಷಮೆ ಕೇಳಿದ್ದಾರೆ.
ಮೋದಿ ಭಾಷಣ ಮಾಡುತ್ತಿರುವ 60 ಕಿ ಮೀ ದೂರದ ಶಾಮ್ಲಿ ಮಜಾಫರ್ ನಗರ ಸೇರಿದಂತೆ 11 ಜಿಲ್ಲೆಗಳಲ್ಲಿ ಜನತೆ ಮತ ಚಲಾಯಿಸುತ್ತಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ಮೋದಿ ಪಾಲ್ಗೊಳ್ಳುತ್ತಿರುವ ಮೊದಲ ಚುನಾವಣಾ ರ್ಯಾಲಿ ಇದಾಗಿದೆ. ಸಹರಾನ್ಪುರದಲ್ಲಿ ಮಾ ದುರ್ಗೆಗೆ ನಮಸ್ಕರಿಸುವುದರ ಮೂಲಕ ಮೋದಿ ಭಾಷಣ ಆರಂಭಿಸಿದರು. ದುರ್ಗೆಯ ನಾಲ್ಕು ರೂಪಗಳು ಕಾಣುವಂತಹ ಸ್ಥಳದಿಂದ ನಾನು ಎಲ್ಲಾ ತಾಯಂದಿರು ಮತ್ತು ಸಹೋದರಿಯರನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಈ ಭಾರಿಯ ಚುನಾವಣೆಯಲ್ಲಿ ಸಹರಾನ್ಪುರದಿಂದ ಪ್ರಚಾರ ಆರಂಭಿಸುತ್ತಿರುವುದು ಸಂತಸ ತಂದಿದೆ. ಇಲ್ಲಿಂದಲೇ ಮೊದಲ ಹಂತದ ಮತದಾರರಲ್ಲಿ ಕ್ಷಮೆ ಕೇಳುತ್ತೇನೆ. ಚುನಾವಣೆ ಘೋಷಣೆಯಾದ ನಂತರ ಅಲ್ಲಿಗೆ ಹೋಗುವುದು ನನ್ನ ಕರ್ತವ್ಯವಾಗಿತ್ತು, ಆದರೆ ಚುನಾವಣಾ ಆಯೋಗದ ನಿಷೇಧದಿಂದ ನಾನು ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ನಾನು ಅವರನ್ನ ವರ್ಚುವಲ್ ಶೃಂಗಸಭೆಯಲ್ಲಿ ಭೇಟಿಯಾಗಿದ್ದೆ, ಆದರೆ ಅಲ್ಲಿಗೆ ಹೋಗಿ ಅವರನ್ನು ನೋಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ನಾನು ಮೊದಲ ಹಂತದ ಮತದಾರರಲ್ಲಿ ಕ್ಷಮೆಯಾಚಿಸುತ್ತೇನೆ. ಇದರೊಂದಿಗೆ ಎರಡನೇ ಹಂತದ ಮತದಾರರಿಗೆ ನಮಸ್ಕರಿಸಿ, ನಿಮ್ಮ ಆಶೀರ್ವಾದ ಪಡೆದು ಇಂದಿನಿಂದ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದೇನೆ. ಎಂದು ಮೋದಿ ಹೇಳಿದರು..