UP Election | ಸಲಾಂ ರಾಮ್ ರಾಮ್ ಎಂದ ಅಖಿಲೇಶ್, ಪ್ರಿಯಾಂಕಾ
ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಕುತೂಹಲಕಾರಿ ದೃಶ್ಯವೊಂದು ನಡೆದಿದೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.
ಬುಲಂದ್ ಶಹರ್‌ನಲ್ಲಿ ಜಯಂತ್ ಚೌಧರಿ ಅವರೊಂದಿಗೆ ಅಖಿಲೇಶ್ ಪ್ರಚಾರ ನಡೆಸುತ್ತಿದ್ದಾಗ… ಪ್ರಿಯಾಂಕಾ ಕೂಡ ತಮ್ಮ ಬೆಂಗಾವಲು ಪಡೆಯೊಂದಿಗೆ ಅಲ್ಲಿಗೆ ಬಂದರು.
ಈ ವೇಳೆ ಮೂವರು ನಾಯಕರು ಪರಸ್ಪರ ಶುಭಾಶಯ ಕೋರಿದರು. ಅಲ್ಲಿದ್ದ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರು ಬಾವುಟಗಳನ್ನು ಬೀಸಿ ಸಂತಸದಿಂದ ಶಿಳ್ಳೆ ಹೊಡೆದರು. ಈ ದೃಶ್ಯದ ಫೋಟೋವನ್ನು ಅಖಿಲೇಶ್.. ವಿಡಿಯೋವನ್ನು ಪ್ರಿಯಾಂಕಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
https://twitter.com/priyankagandhi/status/1489274170630610945?ref_src=twsrc%5Etfw%7Ctwcamp%5Etweetembed%7Ctwterm%5E1489274170630610945%7Ctwgr%5E%7Ctwcon%5Es1_c10&ref_url=https%3A%2F%2Fwww.sakshi.com%2Ftelugu-news%2Fpolitics%2Futtar-pradesh-assembly-election-2022-priyanka-gandhi-akhilesh-yadav-crossed
ಯುಪಿ ವಿಧಾನಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಮತದಾನ ಫೆಬ್ರವರಿ 10 ರಂದು ನಡೆಯಲಿದೆ.
ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದೆ. ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಜೊತೆಗೆ ಕಣಕ್ಕೆ ಇಳಿದಿದೆ.
ಆಡಳಿತಾರೂಢ ಬಿಜೆಪಿಗೆ, ಎರಡು ಪಕ್ಷಗಳ ನಡುವೆ ಪ್ರಮುಖ ಪೈಪೋಟಿ ಎದುರಾಗಲಿದೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಪ್ರಿಯಾಂಕಾ ಗಾಂಧಿ ಇಡೀ ಕಾಂಗ್ರೆಸ್ ಪಕ್ಷದ ಪ್ರಚಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಮುನ್ನಡೆಯುತ್ತಿದ್ದಾರೆ.








