ಯುಪಿಯಂತೆ ಕೆರಳದಲ್ಲಿ ಧರ್ಮದ ಮೇಲೆ ಕೊಲೆಯಾಗುವುದಿಲ್ಲ. ಯೋಗಿ ಹೇಳಿಕೆಗೆ ಪಿಣರಾಯ್ ತಿರುಗೇಟು..
ಬಿಜೆಪಿಯನ್ನ ಅಧಿಕಾರದಿಂದ ದೂರವಿಟ್ಟರೆ ಉತ್ತರ ಪ್ರದೇಶ ಕೇರಳ, ಪಶ್ಚಿಮ ಬಂಗಾಳದ ರೀತಿ ಬದಲಾಗದಲಿದೆ ಎಂದು ಯೋಗಿ ಆದಿತ್ಯನಾಥ್ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ತಿರುಗೇಟು ನೀಡಿದ್ದಾರೆ. ಕಾಶ್ಮೀರದ ಸೌಂದರ್ಯ ಬಂಗಾಳದ ಸಂಸ್ಕೃತಿ ಮತ್ತು ಕೇರಳದ ಶಿಕ್ಷಣವನ್ನ ಪಡೆದರೆ ಅದು ಉತ್ತರಪ್ರದೇಶದ ಅದೃಷ್ಟ ಎಂದು ಶಶಿ ತರೂರ್ ಟಾಂಗ್ ನೀಡಿದ್ದಾರೆ.
ಈ ಹೇಳಿಕೆಗೆ ಕೆರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿ ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ “ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವು ಅತ್ಯುತ್ತಮ ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಸಮಾಜ ಕಲ್ಯಾಣದೊಂದಿಗೆ ಸಾಮರಸ್ಯದ ಸಮಾಜವನ್ನು ಅನುಭವಿಸುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು, ಅಲ್ಲಿ “ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡಲಾಗುವುದಿಲ್ಲ”. ಉತ್ತರ ಪ್ರದೇಶದ ಜನರು ಇದನ್ನೆ ಬಯಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಧಾನಸಭೆ ಚುನಾವಣೆಯಲ್ಲಿ “ತಪ್ಪು ಮಾಡಿದರೆ” ರಾಜ್ಯವು ಕಾಶ್ಮೀರ, ಕೇರಳ ಮತ್ತು ಬಂಗಾಳದಂತಾಗುವುದು ಎಂದು ಮತದಾರರಿಗೆ ಎಚ್ಚರಿಕೆ ನೀಡಿದ್ದರು.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಏಳು ಹಂತದ ಚುನಾವಣೆ ಮುಗಿದ ಬಳಿಕ ಮತ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.







