UP : ಗಾಝಿಯಾಬಾದ್ ಜೈಲಿನಲ್ಲಿನ 140 ಕೈದಿಗಳಿಗೆ HIV ಪಾಸಿಟಿವ್
ಉತ್ತರ ಪ್ರದೇಶದ ಗಾಝಿಯಾಬಾದ್ ನ ದಾಸ್ನಾ ಜೈಲಿನಲ್ಲಿ ಸುಮಾರು 140 ಕೈದಿಗಳಿಗೆ ಹೆಚ್‌ಐವಿ ದೃಢಪಟ್ಟಿರುವ ಆಘಾತಕಾರಿ ವಿಚಾರ ಗೊತ್ತಾಗಿದೆ..
ಜೈಲಿನಲ್ಲಿ ಒಟ್ಟು 5,500 ಕೈದಿಗಳಿದ್ದಾರೆ. ಆರೋಗ್ಯ ತಪಾಸಣೆ ವೇಳೆ 140 ಕೈದಿಗಳಿಗೆ ಹೆಚ್ ಐವಿ ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೇ 35 ಕೈದಿಗಳಿಗೆ ಟಿಬಿ ಇರುವುದು ಪತ್ತೆಯಾಗಿದೆ. ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯಿಂದ ಹೆಚ್‌ಐವಿ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.








