Uttarapradesha: ರೈತರಿಗೆಂದೇ ವಿಶಿಷ್ಠ farm ID ಒದಗಿಸಲಿದೆ ಯೋಗಿ ಸರ್ಕಾರ
ಉತ್ತರ ಪ್ರದೇಶ ಸರ್ಕಾರ ರೈತರಿಗೆ ಆಧಾರ್ ಸಂಖ್ಯೆಯನ್ನ ಹೋಲುವ ವಿಶಿಷ್ಟವಾದ ಫಾರ್ಮ್ ಐಡಿಯನ್ನ ಒದಗಿಸಲು ಮುಂದಾಗಿದೆ. ಇದನ್ನು ಎಲ್ಲಾ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನ ಒದಗಿಸಲು ಆಧಾರ್ನೊಂದಿಗೆ ಲಿಂಕ್ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಆಧಾರ್ ಪರಿಶೀಲನೆ ಬಳಸಲಾಗುವುದು.
ಆಧಾರ್ ಬಳಕೆಯನ್ನು ಹೆಚ್ಚು ಸರಳಗೊಳಿಸಲು ಕೈಗೊಂಡ ಇತ್ತೀಚಿನ ಉಪಕ್ರಮಗಳ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ, ಆಧಾರ್ ಸಹಾಯದಿಂದ ಯುಪಿ ಸರ್ಕಾರ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಗರಿಷ್ಠ ಸಂಖ್ಯೆಯ ಜನರಿಗೆ ನೀಡಿದೆ ಎಂದು ಹೇಳಿದರು.
ಆಧಾರ್ ಪರಿಶೀಲನೆಯ ಮೂಲಕ ಸರ್ಕಾರವು ಸುಮಾರು 8400 ಕೋಟಿ ರೂಪಾಯಿಗಳನ್ನು ಉಳಿಸಿದೆ ಎಂದು ಅವರು ಹೇಳಿದರು. ಆಧಾರ್ ಕಾರ್ಡ್ ಪರಿಶೀಲನೆಯ ಸಹಾಯದಿಂದ ಸುಮಾರು ಒಂದು ಕೋಟಿ 92 ಲಕ್ಷ ಶಾಲಾ ಮಕ್ಕಳು ವಿವಿಧ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು ಈಗಾಗಲೇ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಶೀಘ್ರದಲ್ಲೇ ಕುಟುಂಬ ಐಡಿಯನ್ನು ನೀಡಲು ಪ್ರಾರಂಭಿಸುತ್ತದೆ ಎಂದು ಮಿಶ್ರಾ ಹೇಳಿದರು. ಈವರೆಗೆ ಯಾವುದೇ ರೀತಿಯ ಸವಲತ್ತುಗಳನ್ನು ಪಡೆಯದ ಕುಟುಂಬಗಳನ್ನು ಸರ್ಕಾರ ಈ ಯೋಜನೆಯ ವ್ಯಾಪ್ತಿಗೆ ತರಲಿದೆ ಎಂದು ಹೇಳಿದರು.








