ರೈತ ಮುಖಂಡ ರಾಕೇಶ್ ಟಿಕಾಯತ್ ಬಂಧನ – ಗಾಜಿಪುರ ಗಡಿಯಲ್ಲಿ ಅರೆಸ್ಟ್..
ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕೈತ್ ಅವರನ್ನು ದೆಹಲಿ ಪೊಲೀಸರು ಗಾಜಿಪುರ ಗಡಿಯಲ್ಲಿ ಬಂಧಿಸಲಾಗಿದೆ. ನಿರುದ್ಯೋಗಿಗಳ ಧರಣಿಯಲ್ಲಿ ಪಾಲ್ಗೊಳ್ಳಲು ರಾಕೇಶ್ ಟಿಕಾಯತ್ ಜಂತರ್ ಮಂತರ್ಗೆ ಹೋಗುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಅವರನನ್ನು ವಶಕ್ಕೆ ಪಡೆಯಲಾಗಿದೆ.
ಮಾಹಿತಿಯ ಪ್ರಕಾರ, ಬಿಕೆಯು ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕೈತ್ ಅವರನ್ನು ಇಂದು ಮಧ್ಯಾಹ್ನ ದೆಹಲಿಯ ಗಾಜಿಪುರ ಗಡಿಯಲ್ಲಿ ಬಂಧಿಸಲಾಗಿದೆ. ಪೊಲೀಸರು ಠಾಣೆಯಲ್ಲಿ ಇರಿಸಿದ್ದಾರೆ. ರಾಕೇಶ್ ಟಿಕಾಯತ್ ಜೊತೆಗೆ ಅನೇಕ ಕಾರ್ಯಕರ್ತರನ್ನ ಪೊಲೀಸ್ ಠಾಣೆಯಲ್ಲಿ ಕೂರಿಸಲಾಗಿದೆ.
ಇದನ್ನು ದೃಢಪಡಿಸಿರುವ ಬಿಕೆಐಯು ಜಿಲ್ಲಾಧ್ಯಕ್ಷ ಯೋಗೇಶ್ ಶರ್ಮಾ ಅವರು, ದೆಹಲಿ ಪೊಲೀಸರು ಟಿಕೈತ್ ಅವರನ್ನ ಅರೆಸ್ಟ್ ಮಾಡಿದ್ದಾರೆ ಎಂದು ಮುಜಫರ್ ನಗರದಲ್ಲಿ ಹೇಳಿದ್ದಾರೆ.
ಇದಕ್ಕೂ ಮುನ್ನ ಶನಿವಾರ ಯುಪಿಯ ಮುಜಾಫರ್ನಗರದಲ್ಲಿ ನಡೆದ ರೈತರ ಧರಣಿ ವೇಳೆ ಬಿಕೆಯು ರಾಷ್ಟ್ರೀಯ ಅಧ್ಯಕ್ಷ ಚೌಧರಿ ನರೇಶ್ ಟಿಕೈತ್ ಅವರು ಲಖೀಂಪುರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದರು.