UP ಫಲಿತಾಂಶ – 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ “ಯೋಗಿ”
ಐದು ಸಲ ಲೋಕಸಭೆ ಸಂಸದರಾಗಿ ಆಯ್ಕೆಯಾಗಿದ್ದ ಯೋಗಿ ಆದಿತ್ಯನಾಥ್ ಇದೇ ಮೊದಲ ಬಾರಿಗೆ ವಿಧಾನಸಭೆಗೆ ಚುಣಾವಣೆಗೆ ಅಖಾಡಕ್ಕಿಳಿದಿದ್ದರು. ಮೊದಲ ಸ್ಪರ್ಧೆಯಲ್ಲೇ ಉತ್ತರ ಪ್ರದೇಶ ಸಿಎಂ ಭಾರಿ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಗೋರಖ್ಪುರ್ ನಗರ ಕ್ಷೇತ್ರದಿಂದ ಚುನಾವಣಗೆ ಸ್ಪರ್ಧಿಸಿದ್ದ ಯೋಗಿ ಆದಿತ್ಯನಾಥ್ ತಮ್ಮ ಪ್ರತಿಸ್ಪರ್ಧಿಯ ವಿರುದ್ಧ 1,02,399 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ಗೋರಖ್ಪುರ ನಗರ ಕ್ಷೇತ್ರ ಬಿಜೆಪಿಯ ಭದ್ರಕೋಟೆ. 1967ರ ಬಳಿಕ ನಡೆದ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ (ಆಗ ಭಾರತೀಯ ಜನಸಂಘ) ಸೋಲು ಕಂಡಿದ್ದೇ ಇಲ್ಲ. ಈ ಬಾರಿ ಗೋರಖ್ಪುರದಲ್ಲಿ ಯೋಗಿ ಅವರನ್ನು ಕಣಕ್ಕಿಳಿಸುವ ಮೂಲಕ ಗೋರಖ್ಪುರ-ಬಸ್ತಿ ವ್ಯಾಪ್ತಿಯ 41 ಕ್ಷೇತ್ರಗಳಲ್ಲೂ ವಿಜಯಪತಾಕೆ ಹಾರಿಸುವುದು ಬಿಜೆಪಿಯ ಉದ್ದೇಶವಾಗಿತ್ತು.
2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 41 ಸೀಟುಗಳ ಪೈಕಿ ಬಿಜೆಪಿ 38ರಲ್ಲಿ ಬಿಜೆಪಿ ಗೆಲುವು ಪಡೆದಿದೆ. ಗೋರಖ್ಪುರ ಜಿಲ್ಲೆಯ 9 ಕ್ಷೇತ್ರಗಳ ಪೈಕಿ 8ರಲ್ಲಿ ಬಿಜೆಪಿ ವಿಜಯ ಸಾಧಿಸಿದೆ.







