ಕೊಡಗು: ಕೊರೊನಾ ಕಾರಣ ಹೇಳಿ ಹಲವು ಕಾರ್ಯ ಚಟುವಟಿಕೆ ಸ್ಥಗಿತಗೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರಿಂದ ಜನಸಾಮ್ಯರಾಗಲಿ ಪ್ರಭಾವಿಗಳಿಗೂ ಕಂಟಕ ಇದ್ದೇ ಇತ್ತು.
ರಿಯಲ್ ಸ್ಟಾರ್ ಉಪೇಂದ್ರ ಕುಟುಂಬ ಸಮೇತ ಅದರಲ್ಲೂ `ಏ’ ಸಿನಿಮಾದ ಮೊದಲೇ ಪರಿಚಯವಿದ್ದ ಜಿಗರಿ ದೋಸ್ಥ್ ಆದ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಉಪೇಂದ್ರ ಪತ್ನಿ ಪ್ರಿಯಾಂಕ ಜೊತೆಗೂಡಿ ಮಕ್ಕಳೊಂದಿಗೆ ಕೊಡಗು ಪ್ರವಾಸ ಕೈಗೊಂಡಿದ್ದಾರೆ.
ಸೋಮವಾರಪೇಟೆಯ ಖಾಸಗಿ ರೆಸಾರ್ಟ್ನಲ್ಲಿ ತಂಗಿದ್ದು ಸ್ಥಳೀಯ ಪ್ರವಾಸಿ ತಾಣಗಳ ವೀಕ್ಷಣೆ ಮಾಡಿದ್ದಾರೆ. ತಾಲ್ಲೂಕಿನ ಪುಷ್ಪಗಿರಿ ತಪ್ಪಲಿನ ಶಾಂತಮಲ್ಲಿಕಾರ್ಜುನ ದೇವಾಲಯಕ್ಕೂ ಭೇಟಿ ಮಾಡಿದ ಉಪೇಂದ್ರ ಕುಟುಂಬ ಕೊಡಗಿನ ವಾತಾವರಣ ಸವಿದಿದ್ದಾರೆ.
ಮುಂದಿನ ಚಿತ್ರೀಕರಣಗಳು ಇದ್ದಲ್ಲಿ ಕೊಡಗಿನಲ್ಲಿ ನಡೆಸುವ ಉದ್ದೇಶವನ್ನು ಸ್ನೇಹಿತರಾರ ರಾಜ್ಯ ಹಾಲು ಒಕ್ಕೂಟದ ಮಾಜಿ ಎಂ.ಡಿ ಆದ ಪ್ರೇಮನಾಥ್ ಬಳಿ ಹೇಳಿದ್ದು, ಕೊರೊನಾ ಸಮಸ್ಯೆ ಬಳಿಕ ನಡೆಯುವ ಶೂಟಿಂಗ್ ಕೊಡಗಿನಲ್ಲಿ ಉಪ್ಪಿ ನಡೆಸುವ ಮಾಹಿತಿ ಲಭ್ಯವಾಗಿದೆ.
ಕೃಪೆ : ಗಿರಿಧರ್ ಕೊಂಪುಳೀರಾ