upendra ಬೆಂಕಿಗೆ ತುಪ್ಪ ಸುರಿಯಲ್ಲ.. ಚೇತನ್ ಗೆ ಟಾಂಗ್ ಕೊಟ್ರಾ ಉಪ್ಪಿ
ಭೂತಕೋಲವು ಹಿಂದೂ ಸಂಸ್ಕೃತಿಯೇ ಅಲ್ಲ ಎಂಬ ನಟ ಚೇತನ್ ಅಹಿಂಸಾ ಹೇಳಿಕೆ ಸದ್ಯ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಚೇತನ್ ರ ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರಿಯಲ್ ಸ್ಟಾರ್ ಉಪೇಂದ್ರ ಈ ಬಗ್ಗೆ ಮಾತನಾಡಿದ್ದಾರೆ.
ನಿನ್ನೆಯ ಘಟನೆಯ ಬಗ್ಗೆ ನಾನೇನು ಮಾತನಾಡಲ್ಲ, ಈ ತರದ ಬೆಳವಣಿಗೆ ಅಸಹ್ಯ ಅನಿಸುತ್ತದೆ.
ಬೆಂಕಿಗೆ ತುಪ್ಪ ಸುರಿಯೋ ಕೆಲಸ ನಾನು ಮಾಡಲ್ಲ, ಭೂತಾರಾಧನೆ ಅದು ಅವರವರ ವೈಯಕ್ತಿಕ ನಂಭಿಕೆಯಾಗಿದೆ.

ನಾನು ಕೂಡ ಅದೇ ಊರಿನಿಂದ ಬಂದವನು. ನನಗೆ ಆ ಬಗ್ಗೆ ನಂಬಿಕೆ ಇದೆ.
ನನ್ನ ತಂದೆ ಇವತ್ತಿಗೂ ನಾಗಾರಾಧನೆ ಮಾಡುತ್ತಾರೆ, ನಾನು ಕೂಡ ಮಾಡುತ್ತೇನೆ ಎಂದು ಉಪೇಂದ್ರ ಹೇಳಿದ್ದಾರೆ.
ಇನ್ನು ಕಾಂತಾರ ಸಿನಿಮಾ ಬಗ್ಗೆ ಮಾತನಾಡುವುದರಾದ್ರೆ ದೇಶದಲ್ಲೆಡೆ ಸಿನಿಮಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾದ ಕಮಾಯಿ ಜೋರಾಗಿದೆ.








