ಮಧ್ಯರಾತ್ರಿ 1 ರಿಂದ 3 ಗಂಟೆವರೆಗೆ UPI ಪಾವತಿ ಸಮಸ್ಯೆ..! ಕಾರಣವೇನು..?
ನವದೆಹಲಿ: ದೇಶದ ಹೆಚ್ಚು ಜನರು ಪ್ರಸ್ತುತ ಹಣ ಪಾವತಿ , ಹಣ ರವಾನೆಯ ವಹಿವಾಟಿಗೆ ಅವಲಂಬಿತರಾಗಿರುವ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಮಧ್ಯರಾತ್ರಿ ನಂತರ ಸಮಸ್ಯೆಗಳು ಎದುರಾಗಬಹುದು ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ ಮಾಹಿತಿ ನೀಡಿದೆ. ಹೌದು ಮಧ್ಯರಾತ್ರಿ 1 ರಿಂದ 3 ಗಂಟೆವರೆಗೆ ಪಾವತಿ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಾಗಬಹುದು ಎಂದು ಹೇಳಿದೆ.
‘ಮುಂದಿನ ಕೆಲವು ದಿನಗಳವರೆಗೆ ಯುಪಿಐ ಪ್ಲಾಟ್ಫಾರ್ಮ್ ಅಪ್ಡೇಟ್ ಪ್ರಕ್ರಿಯೆಯ ಅಡಿಯಲ್ಲಿ ಸಾಗಲಿದೆ’ ಎಂದು ಎನ್ಪಿಸಿಐ ತನ್ನ ಟ್ವಿಟ್ಟರ್ ಅಕೌಂಟ್ನಲ್ಲಿ ತಿಳಿಸಿದೆ. ಈ ನವೀಕರಣ ಪ್ರಕ್ರಿಯೆಯು ಮುಂಜಾನೆ 1 ರಿಂದ ಮುಂಜಾನೆ 3 ರವರೆಗೆ ನಡೆಯಲಿದೆ. ಆದ್ರೆ ಎಷ್ಟು ದಿನಗಳ ಕಾಲ ಈ ಸಮಸ್ಯೆ ಎದುರಿಸಬೆಕೆಂಬುದನ್ನ ಹೇಳಿಕೊಂಡಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel