UPI Technology : ಕಾಮನ್ ವೆಲ್ತ್ ದೇಶಗಳಿಗೆ ಭಾರತದ ಭಾರಿ ಆಫರ್….
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ತಂತ್ರಜ್ಞಾನವನ್ನು ಒದಗಿಸಲು ಭಾರತವು ಮುಂದೆ ಬಂದಿರುವುದಕ್ಕೆ ಕಾಮನ್ವೆಲ್ತ್ ರಾಷ್ಟ್ರಗಳ ಪ್ರಧಾನ ಕಾರ್ಯದರ್ಶಿ ಪೆಟ್ರಿಸಿಯಾ ಸ್ಕಾಟ್ಲ್ಯಾಂಡ್ ಸಂತಸ ವ್ಯಕ್ತಪಡಿಸಿದ್ದಾರೆ. ಇದೊಂದು ಮಹತ್ವದ ಪರಿವರ್ತನೆಯ ನಡೆ ಎಂದು ಶ್ಲಾಘಿಸಿದ್ದಾರೆ. ಕಾಮನ್ವೆಲ್ತ್ ಬ್ಯಾಂಕ್ ಆಫ್ ಗವರ್ನರ್ಗಳ ಸಭೆಯಲ್ಲಿ ಭಾರತವ ಈ ಪ್ರಸ್ತಾಪವನ್ನ ಮುಂದಿಟ್ಟಿತ್ತು.
ಸುದ್ದಿಸಂಸ್ಥೆಯೊಂದಕ್ಕೆ ಮಾತನಾಡಿದ ಪೆಟ್ರಿಸಿಯಾ ಸ್ಕಾಟ್ಲೆಂಡ್, ಕಾಮನ್ವೆಲ್ತ್ ರಾಷ್ಟ್ರಗಳಿಗೆ ಏಕೀಕೃತ ಪಾವತಿ ಇಂಟರ್ಫೇಸ್ ತಂತ್ರಜ್ಞಾನವನ್ನು ಒದಗಿಸಲು ಭಾರತ ಮುಂದಾಗಿದೆ. ಈ ತಿಂಗಳ 12 ರಂದು ನಡೆದ ಕಾಮನ್ವೆಲ್ತ್ ಬ್ಯಾಂಕ್ ಆಫ್ ಗವರ್ನರ್ಗಳ ಸಭೆಯಲ್ಲಿ, ಭಾರತ ನೀಡಿದ ಈ ಕೊಡುಗೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.
ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಹಣ ಖರ್ಚಾಗುತ್ತದೆ ಎನ್ನಲಾಗಿದೆ. ಇಂತಹ ಮುಕ್ತಮನಸ್ಸು, ಮತ್ತು ಔದಾರ್ಯ ಸ್ವಾಗತಾರ್ಹ ಎಂದರು. ಭಾರತದ ಆವಿಷ್ಕಾರ ಹಲವು ಸದಸ್ಯ ರಾಷ್ಟ್ರಗಳಲ್ಲಿ ಭರವಸೆ ಮೂಡಿಸಿದೆ ಎಂದರು. ಭಾರತ ಕೇವಲ ಹೊಸ ತಂತ್ರಗಳನ್ನು ಅಭಿವೃದ್ಧಿ ಪಡಿಸದೆ, ಜನಹಿತಕ್ಕಾಗಿ ಬೇರೆ ದೇಶಗಳಿಗೆ ಹಸ್ತಾಂತರಿಸಲು ಮುಂದಾಗಿರುವುದೇ ಇದಕ್ಕೆ ಕಾರಣ ಎಂದರು.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡಿಜಿಟಲ್ ವಹಿವಾಟು
UPI ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಬ್ಯಾಂಕ್ ಖಾತೆಯಿಂದ ಇನ್ನೊಬ್ಬರ ಬ್ಯಾಂಕ್ ಖಾತೆಗೆ ಡಿಜಿಟಲ್ ಮಾಧ್ಯಮದ ಮೂಲಕ ತಕ್ಷಣವೇ ಹಣವನ್ನು ಕಳುಹಿಸಲು ಅನುವು ಮಾಡಿಕೊಡುವ ತಂತ್ರಜ್ಞಾನವಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಬಹಿರಂಗಪಡಿಸಿದ ವಿವರಗಳ ಪ್ರಕಾರ, ಸೆಪ್ಟೆಂಬರ್ನಲ್ಲಿ, ನಮ್ಮ ದೇಶದಲ್ಲಿ ಯುಪಿಐ ಮೂಲಕ ರೂ.11 ಲಕ್ಷ ಕೋಟಿಗೂ ಹೆಚ್ಚು ಪಾವತಿಗಳನ್ನು ಮಾಡಲಾಗಿದೆ. ಪ್ರತಿ ತಿಂಗಳು ನಗದು ರಹಿತ ವಹಿವಾಟು ಹೆಚ್ಚಾಗುತ್ತಿರುವುದು ಗಮನಾರ್ಹ.
UPI Technology: India’s huge offer to Commonwealth countries…








