ಬೆಂಗಳೂರು: ಉಪ್ಪಿಗಿಂತ ರುಚಿ ಬೇರೆ ಇಲ್ಲ..ಎನ್ನುತ್ತಲೇ ತಮ್ಮ ಸಿನಿಮಾಗಳಲ್ಲಿ ರಿಯಲ್ ಹಾಗೂ ಪಂಚಿಂಗ್ ಡೈಲಾಗ್ಗಳಿಂದಾಗಿಯೇ ಸ್ಯಾಂಡಲ್ವುಡ್ನಲ್ಲಿ ಹವಾ ಎಬ್ಬಿಸಿರುವ ನಟ ಉಪೇಂದ್ರ ಏನೇ ಮಾಡಿದರೂ, ಏನೇ ಹೇಳಿದ್ರೂ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತೆ.
ರಿಯಾಲಿಸ್ಟಿಕ್ ಡೈಲಾಗ್ಗಳಿಂದಾಗಿ ಸ್ಯಾಂಡಲ್ವುಡ್ನಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಅಭಿಮಾನಿಗಳ ನೆಚ್ಚಿನ ಉಪ್ಪಿ, ಚಿತ್ರರಂಗದ ಜತೆ ಜತೆಗೆ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದಾರೆ.

ಉಪೇಂದ್ರ ಏನೇ ಮಾಡಿದರೂ, ಚಿಂತನೆ ಮಾಡಿದರೂ ಅದಕ್ಕೆ ಸಾಮಾಜಿಕ ಕಳಕಳಿ ಇದ್ದೇ ಇರುತ್ತದೆ. ಇತ್ತೀಚೆಗೆ ಚೀನಾ ಆಪ್ಗಳನ್ನು ಬ್ಯಾನ್ ಮಾಡುವ ವಿಚಾರ ಬಂದಾದ ಅದಕ್ಕಿಂತ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ, ಆರೋಗ್ಯ ವ್ಯವಸ್ಥೆಯಲ್ಲಿ ಲೋಪಗಳನ್ನು ಸರಿಪಡಿಸಬೇಕು. ಕೇವಲ ಭಾವನಾತ್ಮಕ ವಿಚಾರಗಳನ್ನು ಬಿಟ್ಟು ಶಿಕ್ಷಣದತ್ತ ಒತ್ತು ನೀಡಬೇಕೆಂಬ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದರ ಬೆನ್ನಲ್ಲೇ ಇತ್ತೀಚೆಗೆ ನಡೆದ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳನ್ನು ಮುಂದಿಟ್ಟುಕೊಂಡು ನಟ ಉಪೇಂದ್ರ ಟ್ವಿಟರ್ನಲ್ಲಿ ಗಣಿತದ ಬಗೆಗಿನ ತರ್ಲೆ ಟ್ವಿಟರ್ರೊಂದನ್ನು ಹಾಕಿದ್ದಾರೆ.
(a+b)2 = a2 + 2ab + b2
a2 + b2 = (a + b)2 – 2ab
(a – b)2 = a2 – 2ab + b2
(a + b + c)2 = a2 + b2 + c2 + 2ab + 2bc + 2ca
(a – b – c)2 = a2 + b2 + c2 – 2ab + 2bc – 2ca

ಸೇಮ್ ಸಿಲಬಸ್..ಸೇಮ್ ಎಜುಕೇಶನ್..ತುಂಬಾ ಯೋಚ್ನೆ ಮಾಡಿದ ಮೇಲೆ ನನಗನ್ನಿಸಿದ್ದು ಗಣಿತದಲ್ಲಿ ಬರೋ ಈ ರೀತಿಯ ಪ್ರಶ್ನೋತ್ತರ ನಮ್ಮ ಜೀವನದಲ್ಲಿ ಯಾವಾಗ ಕೆಲಸಕ್ಕೆ ಬರುತ್ತೆ..ಮಿ.ಸತ್ಯರ ಪ್ರಶ್ನೆಗೆ ಉತ್ತರ ಯಾರಾದರೂ ತಿಳಿದವರು ಹೇಳುತ್ತೀರಾ ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.
ಉಪೇಂದ್ರ ಅವರ ಪ್ರಶ್ನೆಗೆ ಟ್ವಿಟರ್ನಲ್ಲೊ ಪರ-ವಿರೋಧ ಅಭಿಪ್ರಾಯಗಳು ಬಂದಿವೆ. ಕೆಲವರು ಉಪೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರೆ, ಮತ್ತೆ ಕೆಲವರು ಗಣಿತದ ಈ ಸೂತ್ರ ಉಪಯೋಗಕ್ಕೆ ಬರುತ್ತದೆ ಎಂದು ರಿಪ್ಲೆ ಮಾಡಿದ್ದಾರೆ.

ಉಪೇಂದ್ರ ಅವರ ಈ ಟ್ವಿಟರ್ಗೆ ಪ್ರತಿಕ್ರಿಯಿಸಿರೋ ಗಜೇಂದ್ರ ಸಿ.ಹೆಚ್ ಎಂಬುವರು ನಿಮ್ಮ ಈ ಪ್ರಶ್ನೆಯನ್ನು ಮೊದಲು ನಿಮ್ಮ ಟೀಚರ್ ಬಳಿ ಕೇಳಿ ಉತ್ತರ ಕೊಡುತ್ತಾರೆ. ಅದೇ ರೀತಿ, ಪ್ರಧಾನಿ ಮೋದಿ ಅವರನ್ನೂ ಕೇಳಿ, ಕೊರೊನಾ ತಡೆಗೆ ಈ ಫಾರ್ಮುಲಾ ವರ್ಕೌಟ್ ಆಗುತ್ತಾ ಅಂತ ಸವಾಲು ಹಾಕಿದ್ದಾರೆ.
ಮೋಹಿತ್ ನರಸಿಂಹಮೂರ್ತಿ ಎಂಬುವರು ನೀವು ಮನೆಯ ಒಳಗೆ ಕುಳಿತು ಜಿಮ್ ಮಾಡುತ್ತಾ ನಿಮ್ಮನ್ನು ನೋಡಲು ಬಂದವರಿಗೆ ಇಲ್ಲಾ ಎಂದು ಹೇಳಿ ಕಳಿಸುತ್ತೀರಲ್ಲಾ..ಅದು ಏತಕ್ಕೆ ಎಂದು ತಿಳಿಯಬಹುದೇ..!ಉತ್ತರ ಕೊಡ್ತಾರಾ ಬುದ್ಧಿವಂತರು ಎಂದು ಕಾಲೆಳೆದರೆ, ಚರಣ್ ಎಂಬುವರು ವಿಜ್ಞಾನಿಗಳು, ಗಣಿತ ತಜ್ಞರು, ಸಶೋಧಕರು ಕೆಲವು ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸುವಾಗ ಇಂತ ಸೂತ್ರಗಳು ಉಪಯೋಗಕ್ಕೆ ಬರುತ್ತವೆ ಎಂದಿದ್ದರೆ. ಮತ್ತೆ ಕೆಲವರು ಈಗ 6ಜಿ ಬರುತ್ತಲ್ಲಾ ಅದಕ್ಕೆ ಇದೇ ಗಣಿತ ಬೇಕು ಎಂದು ಉಪ್ಪಿಗೆ ಟಾಂಗ್ ನೀಡಿದ್ದಾರೆ.








