ಸೆಪ್ಟೆಂಬರ್ 5 ರಂದು UPSC-EPFO ಪರೀಕ್ಷೆ
ನವದೆಹಲಿ : ಸೆಪ್ಟೆಂಬರ್ ಐದರಂದು UPSC-EPFO ಪರೀಕ್ಷೆ ನಡೆಯಲಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಲೆಕ್ಕಪತ್ರ ಅಧಿಕಾರಿಯ ಆಯ್ಕೆಗಾಗಿ ಕೇಂದ್ರ ಲೋಕಸೇವಾ ಆಯೋಗ ಈ ನೇಮಕಾತಿ ಪರೀಕ್ಷೆ ನಡೆಸಲಿದೆ.
ಈ ಪರೀಕ್ಷೆ ಮೂಲಕ ಒಟ್ಟು 421 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಅಂದಹಾಗೆ ಈ ಪರೀಕ್ಷೆ ಮೊದಲು ಅಕ್ಟೋಬರ್ 4, 2020 ರಂದು ನಿಗದಿ ಮಾಡಲಾಗಿತ್ತು. ನಂತರ, ಪರೀಕ್ಷೆಯನ್ನು ಮುಂದೂಡಲಾಗಿತ್ತು.
ಇದೀಗ ಪರೀಕ್ಷೆಗೆ ನಿಗಧಿಯಾಗಿದ್ದು, ಯುಪಿಎಸ್ಸಿ ಇಪಿಎಫ್ ಒ ಪರೀಕ್ಷೆಯ ಪ್ರವೇಶ ಕಾರ್ಡ್ ಗಳು ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯವಿದೆ.
ಇನ್ನು ಪರೀಕ್ಷೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.









