ಬಾಲಿವುಡ್ ನಟಿ ಉರ್ಫಿ ಜಾವೇದ್ ತಿಂಗಳಿಗೆ ಎಷ್ಟು ಗಳಿಸುತ್ತಾರೆ ಗೊತ್ತಾ…?
‘ಬಿಗ್ ಬಾಸ್’ OTT ಯಿಂದ ಬೆಳಕಿಗೆ ಬಂದ ಉರ್ಫಿ ಜಾವೇದ್, ಸಿನಿಮಾ ಜಗತ್ತಿನಲ್ಲಿ ಅಸಾಮಾನ್ಯ ಫ್ಯಾಷನ್ ಸೆನ್ಸ್ ನಿಂದನೇ ಹೆಸರುವಾಸಿಯಾಗಿದ್ದಾರೆ. ಉರ್ಫಿ ತನ್ನ ಧಿರಿಸಿನಿಂದ ಪ್ರತಿ ದಿನವೂ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದೆ ನಟಿ ಜೀವನ ಸಾಗಿಸುತ್ತಿರುವುದಂತೂ ಸತ್ಯ.
ಉರ್ಫಿ ಜಾವೇದ್ ಹನ್ನೆರಡಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ‘ದುರ್ಗಾ’, ‘ಸಾತ್ ಫೆರೆ ಕಿ ಹೇರಾ ಫೇರಿ’, ‘ಬೇಪ್ನಾಹ್’, ‘ಜಿಜಿ ಮಾ’, ‘ದಯಾನ್’, ‘ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಮತ್ತು ‘ಕಸೌತಿ ಜಿಂದಗಿ’ ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಉರ್ಫಿ ಗೆ ಮನ್ನಣೆ ಸಿಕ್ಕಿರುವುದು ‘ಬಿಗ್ ಬಾಸ್’ ನಿಂದ ಮಾತ್ರ.
ಹಲವು ಬಾರಿಯೂ ಉರ್ಫಿ ಜಾವೇದ್ (Urfi Javed Net Worth) ಗಳಿಕೆಯ ಬಗ್ಗೆ ಪ್ರಶ್ನೆ ಉದ್ಭವಿಸುತ್ತಲೇ ಇರುತ್ತವೆ. ಉರ್ಫಿ ಕೋಟ್ಯಂತರ ಆಸ್ತಿಗಳ ಒಡೆತಿ ಮತ್ತು ಪ್ರತಿ ತಿಂಗಳು ಲಕ್ಷಗಳಲ್ಲಿ ಸಂಪಾದಿಸುತ್ತಾರೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಒಂದು ವರದಿಯ ಪ್ರಕಾರ, ಉರ್ಫಿ ಧಾರಾವಾಹಿಯ ಒಂದು ಸಂಚಿಕೆಗೆ 25 ರಿಂದ 30 ಸಾವಿರ ರೂಪಾಯಿಗಳನ್ನು ವಿಧಿಸುತ್ತಾರೆ. ಮತ್ತು ಪ್ರತಿ ತಿಂಗಳು ಸುಮಾರು 30 ಲಕ್ಷ ರೂಪಾಯಿಗಳನ್ನು ಸಂಪಾದಿಸುತ್ತಾರೆ. ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 172 ಕೋಟಿ.
ಉರ್ಫಿ ಜನಿಸಿದ್ದು ಲಕ್ನೋದಲ್ಲಿ ಆದರೆ ಈಗ ಮುಂಬೈನ ಐಷಾರಾಮಿ ಫ್ಲಾಟ್ನಲ್ಲಿ ವಾಸಿಸುತ್ತಿದ್ದಾರೆ. ಅವರು ಜೀಪ್ ಕಂಪಾಸ್ ಎಸ್ ಯುವಿ ಹೊಂದಿದ್ದು, ಇದರ ಬೆಲೆ ಸುಮಾರು 25 ಲಕ್ಷ ರೂ. ಈ ಕಾರಿನೊಂದಿಗೆ ಉರ್ಫಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಾರೆ.
Urfi Javed Net Worth: Do you know how much Bollywood actress Urfi Javed earns per month?