ವಿಮಾನದಲ್ಲಿ ಮಾಸ್ಕ್ ಧರಿಸದ ಪ್ರಯಾಣಿಕ – ವಿಮಾನವೇ ವಾಪಸ್
ಪ್ರಯಾಣಿಕರೊಬ್ಬರು ಕೋವಿಡ್ ಮಾಸ್ಕ ಧರಿಸಲು ನಿರಾಕರಿಸಿದ ಕಾರಣ ವಿಮಾನವೊಂದು ಮಾರ್ಗ ಮಧ್ಯದಿಂದ ವಾಪಸ್ ಬಂದಿರುವ ಘಟನೆ ನಡೆದಿದೆ. ಮಿಯಾಮಿಯಿಂದ ಲಂಡನ್‌ಗೆ ಹೊರಟಿದ್ದ ಅಮೇರಿಕನ್ ಏರ್‌ಲೈನ್ಸ್ ಜೆಟ್‌ಲೈನರ್ ವಿಮಾನವೊಂದು ವಿಮಾನದ ಹಾರಾಟ ಶುರುಮಾಡಿದ ಸ್ವಲ್ಪ ಹೊತ್ತಿನಲ್ಲೆ ಕೆಳಗಿಳಿದಿದೆ.
“ಮಿಯಾಮಿಯಿಂದ ಲಂಡನ್‌ಗೆ ಹೊರಟಿದ್ದ ಅಮೇರಿಕನ್ ಏರ್‌ಲೈನ್ಸ್ ಫ್ಲೈಟ್ 38, ವಿಚ್ ಪ್ರಯಾಣಿಕರೊಬ್ಬರು ಮಾಸ್ಕ್ ಧರಿಸುವ ನಿಯಮವನ್ನ ಅನುಸರಿಸಲು ನಿರಾಕರಿಸಿದ ಕಾರಣ MIA ಗೆ ಮರಳಿದೆ” ಎಂದು ಏರ್‌ಲೈನ್ಸ್ ಹೇಳಿದೆ.
129 ಪ್ರಯಾಣಿಕರು ಮತ್ತು 14 ಜನರ ಸಿಬ್ಬಂದಿಯನ್ನು ಹೊತ್ತ ಬೋಯಿಂಗ್ 777 ಮಿಯಾಮಿಗೆ ಹಿಂತಿರುಗಿದಾಗ ಪೊಲೀಸರು ಕಾಯುತ್ತಿದ್ದರು. ವಿಮಾನವು ಲ್ಯಾಂಡ್ ಆದ ತಕ್ಷಣ ಪೊಲೀಸರು ಆ ಪ್ರಯಾಣಿಕನನ್ನ ವಿಮಾನದಿಂದ ಕೆಳಗಿಳಿಸಿದ್ದಾರೆ.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಜನವರಿ 2021 ರಲ್ಲಿ ಯುಎಸ್ ದೇಶೀಯ ವಿಮಾನಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ನಿಯಮಗಳನ್ನು ತಿರಸ್ಕರಿಸುವ ಜನರ ಕಡೆಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುವುದಾಗಿ ಹೇಳಿದೆ.
ಮಾಸ್ಕ್ ಧರಿಸಲು ನಿರಾಕರಿಸುವ ಪ್ರಯಾಣಿಕರು ಏರ್ ಲೈನ್ಸ್ ಸಿಬ್ಬಂದಿಯೊಂದಿಗೆ ನಿಂದನೆ, ದೈಹಿಕ ಹಲ್ಲೆ ಮಾಡಲು ಮುಂದಾದ ಬಗ್ಗೆ ಫ್ಲೈಟ್ ಅಟೆಂಡೆಂಟ್ ಗಳು ವರದಿ ಮಾಡಿದ್ದರಿಂದ ಈ ನಿಯಮ ತರಲಾಗಿದೆ.








