ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಮೆರಿಕ (America) ಭೇಟಿ ನೀಡಿದ್ದು, ದೇಶದಿಂದ ಕಳ್ಳಸಾಗಣೆ ಮಾಡಲಾಗಿದ್ದ ಸುಮಾರು 297 ಪುರಾತನ ವಸ್ತುಗಳನ್ನು ಅಮೆರಿಕ ಸರ್ಕಾರ ಭಾರತಕ್ಕೆ (India) ಹಸ್ತಾಂತರಿಸಿದೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರದಾನಿ ಮೋದಿ, ಸಾಂಸ್ಕೃತಿಕ ಆಸ್ತಿಗಳ ಕಳ್ಳಸಾಗಣೆ ದೀರ್ಘಕಾಲದ ಸಮಸ್ಯೆ. ಇದು ಇತಿಹಾಸದುದ್ದಕ್ಕೂ ಅನೇಕ ಸಂಸ್ಕೃತಿಗಳು ಮತ್ತು ದೇಶಗಳ ಮೇಲೆ ಪರಿಣಾಮ ಬೀರಿದೆ. ಭಾರತಕ್ಕೆ ಇದರಿಂದಾಗಿ ಹೊಡೆತ ಬಿದ್ದಿದೆ.
ಸಾಂಸ್ಕೃತಿಕ ಸಂಪರ್ಕವನ್ನು ಆಳಗೊಳಿಸುವುದು ಮತ್ತು ಸಾಂಸ್ಕೃತಿಕ ಆಸ್ತಿಗಳ ಅಕ್ರಮ ಕಳ್ಳಸಾಗಣೆ ವಿರುದ್ಧದ ಹೋರಾಟವನ್ನು ಬಲಪಡಿಸುವುದಕ್ಕಾಗಿ 297 ಅಮೂಲ್ಯ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ್ದಕ್ಕಾಗಿ ನಾನು ಅಧ್ಯಕ್ಷ ಜೋ ಬೈಡನ್ (Joe Biden) ಮತ್ತು ಯುಎಸ್ (US) ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
2014 ರಿಂದ ಭಾರತವು ಮರಳಿ ಪಡೆದ ಒಟ್ಟು ಪ್ರಾಚೀನ ವಸ್ತುಗಳ ಸಂಖ್ಯೆ 640ಕ್ಕೆ ಏರಿಕೆಯಾಗಿದೆ ಎರಿಕೆಯಾಗಿದೆ. ಕ್ರಿ.ಶ 10-11 ನೇ ಶತಮಾನಕ್ಕೆ ಸೇರಿದ ಮಧ್ಯ ಭಾರತದ ಮರಳುಗಲ್ಲಿನ ‘ಅಪ್ಸರೆ’, ಕ್ರಿ.ಶ 15-16 ನೇ ಶತಮಾನಕ್ಕೆ ಸೇರಿದ ಕಂಚಿನ ಜೈನ ತೀರ್ಥಂಕರ, ಕ್ರಿ.ಶ 3-4 ನೇ ಶತಮಾನಕ್ಕೆ ಸೇರಿದ ಪೂರ್ವ ಭಾರತದ ಟೆರಾಕೋಟಾ ಹೂದಾನಿ ಮತ್ತು ಕ್ರಿ.ಪೂ 1 ರಿಂದ 1 ನೇ ಶತಮಾನಕ್ಕೆ ಸೇರಿದ ದಕ್ಷಿಣ ಭಾರತದ ಕಲ್ಲಿನ ಶಿಲ್ಪ ಮರಳಿ ಬಂದಿವೆ.








