ಹೆಚ್ – 1 ಬಿ ವಿಸಾಗಳ ಮೇಲೆ ಅಮೆರಿಕಾ ಸಂಚಲನ ನಿರ್ಣಯ H-1B visa saaksha tv
ಪ್ರಪಂಚವ್ಯಾಪ್ತಿಯಾಗಿ ಕೊರೊನಾ ಕೇಸ್ ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಸಾ ವಿಚಾರವಾಗಿ ಅಮೆರಿಕಾ ನಿರ್ಣಾಯಕ ನಿರ್ಧಾರ ತೆಗೆದುಕೊಂಡಿದೆ.
2022ರ ವರ್ಷಕ್ಕಾಗಿ ಹೆಚ್ 1 ಬಿ, ಎಲ್ 1, ಓ 1 ವಿಸಾಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವೈಯಕ್ತಿಕ ಸಂದರ್ಶನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಈ ವಿಚಾರವನ್ನು ಅಮೆರಿಕ ವಿದೇಶಾಂಗ ಶಾಖೆ ಪ್ರಕಟಿಸಿದೆ. ಹೀಗಾಗಿ ವೀಸಾಕ್ಕೆ ಅರ್ಜಿ ಸಲ್ಲಿಸಿದವರು ಕಾನ್ಸುಲೇಟ್‌ಗೆ ಹೋಗಿ ಭೌತಿಕವಾಗಿ ಸಂದರ್ಶನ ನೀಡಬೇಕಾದ ಅಗತ್ಯವಿಲ್ಲ.
ಹೆಚ್ -2 ವಿಸಾ, ಎಫ್-ಎಂ ವಿಸಾ, ಎಕಾಡಮಿಕ್ ಜೆ ವಿಸಾಗಳ ಮೇಲೆ ಈಗಾಗಲೇ ಇರುವ ಈ ನಿರ್ಬಂಧನವನ್ನು 2022ರ ಡಿಸೆಂಬರ್ ವರೆಗೂ ವಿಸ್ತರಿಸುವುದಾಗಿ ಕಾನ್ಸುಲರ್ ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ ಸ್ಥಳೀಯ ಪರಿಸ್ಥಿತಿಗಳು, ಅಗತ್ಯವಿರುವ ಕಾನ್ಸುಲೇಟ್ ಅಧಿಕಾರಿಗಳು ಇನ್ಪರ್ಸನ್ ಸಂದರ್ಶನಗಳಿಗೆ ಕರೆಯಲು ಅವಕಾಶವಿದೆ.
ಆದ್ದರಿಂದ ಸಂಬಂಧಿತ ವೆಬ್‌ಸೈಟ್‌ಗಳನ್ನು ಪರಿಶೀಲಿಸಲು ವಿದೇಶಾಂಗ ಇಲಾಖೆ ಸೂಚಿಸಿದೆ.









