ಯುಎಸ್ ಓಪನ್ 2020- ಆಂಡಿ ಮುರ್ರೆ- ಕಿಮ್ ಕ್ಲಿಜೆಸ್ಟರ್ ಗೆ ವೈಲ್ಡ್ ಕಾರ್ಡ್ ಎಂಟ್ರಿ..!
ಕೋವಿಡ್-19, ಕ್ವಾರಂಟೈನ್ ನಡುವೆ ಆಗಸ್ಟ್ 31ರಿಂದ ಸೆಪ್ಟಂಬರ್ 13ರವರೆಗೆ ಪ್ರತಿಷ್ಠಿತ ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿ ನಡೆಯಲಿದೆ. ಮಾಜಿ ಯುಎಸ್ ಓಪನ್ ಚಾಂಪಿಯನ್ ಆಂಡಿ ಮುರ್ರೆ ಮತ್ತು ಕೀಮ್ ಕ್ಲಿಜೆಸ್ಟರ್ ಅವರು ಈ ಬಾರಿಯ ಟೂರ್ನಿಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ.
ಆಂಡಿ ಮುರ್ರೆ ಮಾಜಿ ನಂಬರ್ ವನ್ ಆಟಗಾರನಾಗಿದ್ದರು. ಅಲ್ಲದೆ 2012ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಗಿಟ್ಟಿಸಿಕೊಂಡು ಪ್ರಶಸ್ತಿ ಕೂಡ ಗೆದ್ದುಕೊಂಡಿದ್ದರು. 33ರ ಹರೆಯದ ಬ್ರಿಟನ್ ಆಟಗಾರನಾಗಿರುವ ಮುರ್ರೆ 2017 ಮತ್ತು 2019ರಲ್ಲಿ ಗಾಯದಿಂದಾಗಿ ಟೂರ್ನಿಯಲ್ಲಿ ಆಡಿರಲಿಲ್ಲ.
ಇನ್ನು ಕಿಮ್ ಕ್ಲಿಜೆಸ್ಟರ್ ಮೂರು ಬಾರಿ ಯುಎಸ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 2005, 2009 ಮತ್ತು 2010ರಲ್ಲಿ ಕಿಮ್ ಕ್ಲಿಜೆಸ್ಟರ್ ಅವರು ಪ್ರಶಸ್ತಿ ಗೆದ್ದಿದ್ದರು. ಇದೀಗ ಎಂಟು ವರ್ಷಗಳ ಬಳಿಕ ಮತ್ತೆ ಯುಎಸ್ ಓಪನ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇನ್ನು ಯುಎಸ್ ಓಪನ್ ಟೂರ್ನಿಗೆ ಅಮೆರಿಕಾದ ಏಳು ಪುರುಷರು ಮತ್ತು ಏಳು ಮಹಿಳೆಯ ಆಟಗಾರ್ತಿಯರಿಗೆ ವೈಲ್ಟ್ ಕಾರ್ಡ್ ಮೂಲಕ ಎಂಟ್ರಿಯನ್ನು ಕೊಡಲಾಗಿದೆ.








