ಯುಎಸ್ ಓಪನ್ 2020 ಮಹಿಳಾ ಸಿಂಗಲ್ಸ್ – ಮುನ್ನಡೆ ಸಾಧಿಸಿದ ನೌಮಿ ಒಸಾಕಾ, ಲಿನಾ ಪ್ಲಿಸ್ಕೋವಾಗೆ ಆಘಾತ
2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಜಪಾನ್‍ನ ನೌಮಿ ಒಸಾಕಾ ಅವರು ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಒಸಾಕಾ ಅವರು 6-1, 6-2ರಿಂದ ಇಟೆಲಿಯ ಕಾಮಿಲಾ ಗಿಯೊರ್ಗಿ ಅವರನ್ನು ಸುಲಭವಾಗಿ ಮಣಿಸಿದ್ರು. ಯುಎಸ್ ಓಪನ್ ಟೂರ್ನಿಯ ಮಾಜಿ ಚಾಂಪಿಯನ್ ನೌಮಿ ಒಸಾಕಾ ಅವರು ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟವನ್ನಾಡಿದ್ರು. ಅದ್ಭುತ ಸರ್ವ್‍ಗಳ ಮೂಲಕ ಕಾಮಿಲಾ ಗಿಯೋರ್ಗಿ ಅವರನ್ನು ತಲ್ಲಣಗೊಳಿಸಿದ್ರು.
ಇನ್ನೊಂದು ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಟೂರ್ನಿಯ ಅಗ್ರ ಶ್ರೇಯಾಂಕಿತೆ ಚೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾ ಅವರು ಆಘಾತ ಅನುಭವಿಸಿದ್ದಾರೆ. ಎರಡನೇ ಸುತ್ತಿನ ಪಂದ್ಯದಲ್ಲಿ ಕರೊಲಿನಾ ಪ್ಲಿಸ್ಕೋವಾ ಅವರು -6, 6-7ರಿಂದ ಫ್ರಾನ್ಸ್ ನ ಕರೊಲಿನ್ ಗ್ರೆಸಿಯಾ ವಿರುದ್ಧ ಸೋಲು ಅನುಭವಿಸಿದ್ರು.
ಇನ್ನು ಆರನೇ ಶ್ರೇಯಾಂಕಿತೆ ಪೆಟ್ರಾ ಕೆವಿಟೊವಾ ಅವರು ತನ್ನ ಎರಡನೇ ಸುತ್ತಿನ ಪಂದ್ಯದಲ್ಲಿ 7-6, 6-2ರಿಂದ ಉಕ್ರೇನ್ ನ ಕೆಟ್ರಿನಾ ಕೊಝೋಲೊವಾ ಅವರನ್ನು ಮಣಿಸಿದ್ರೆ, ಮಾಜಿ ಚಾಂಪಿಯನ್ ಆಂಜೆಲಿಕ್ ಕೆರ್ಬಾರ್ ಅವರು 6-3, 7-6ರಿಂದ ಜರ್ಮನಿಯ ಅನ್ನಾ ಲಿನಾ ಅವರನ್ನು ಸೋಲಿಸಿದ್ರು.








