ಅಮೆರಿಕಾದಲ್ಲಿ ಟ್ರಕ್ ಒಳಗಡೆ 46 ಅಕ್ರಮ ವಲಸಿಗರ ಶವ ಪತ್ತೆ….
ಸೋಮವಾರ ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್ನಲ್ಲಿ 46 ಅಕ್ರಮ ವಲಸಿಗರ ಶವಗಳು ಪತ್ತೆಯಾಗಿವೆ. 100 ಕ್ಕೂ ಹೆಚ್ಚು ಮಂದಿಯನ್ನ ಟ್ರಕ್ ನಲ್ಲಿ ತುಂಬಲಾಗಿದ್ದು 16 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ಬೇಸಿಗೆಯ ವಿಪರೀತ ಬಿಸಿಯಿಂದಾಗಿ ಟ್ರಕ್ನ ಕಂಟೈನರ್ನ ತಾಪಮಾನ ಹೆಚ್ಚಾಗಿದ್ದು, ಬಿಸಿಲಿನ ತಾಪಕ್ಕೆ ಜನರು ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ 18 ವೀಲ್ ಟ್ರಕ್ ಟೆಕ್ಸಾಸ್ನ ಸ್ಯಾನ್ ಆಂಟೋನಿಯೊ ನಗರದಲ್ಲಿ ಪತ್ತೆಯಾಗಿದೆ. ಇವರೆಲ್ಲರೂ ಅಕ್ರಮವಾಗಿ ಮೆಕ್ಸಿಕೋದಿಂದ ಗಡಿದಾಟುತ್ತಿದ್ದರು. ಸ್ಯಾನ್ ಆಂಟೋನಿಯೊ ನಗರವು ಟೆಕ್ಸಾಸ್-ಮೆಕ್ಸಿಕೋ ಗಡಿಯಿಂದ ಸುಮಾರು 250 ಕಿ.ಮೀ. ದೂರದಲ್ಲಿದೆ.
https://twitter.com/i/status/1541664863143055361
ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರ ಪ್ರಕಾರ, ಟ್ರಕ್ ಕಂಟೈನರ್ನ ಬಾಗಿಲುಗಳು ಅರ್ಧ ತೆರೆದಿದ್ದವು ಅದರೊಳಗೆ ಗಾಳಿಯಾಡಲೂ ಕೂಡ ಅವಕಾಶವಿರಲಿಲ್ಲ ಅಲ್ಲದೇ ಕುಡಿಯಲು ನೀರಿನ ಸೌಕರ್ಯವೂ ಇರಲಿಲ್ಲ ಎಂದು ತಿಳಿಸಿದ್ದಾರೆ. ಟೆಕ್ಸಾಸ್ ಗವರ್ನರ್ ಸಾವಿಗೆ ಬಿಡೆನ್ ಅವರನ್ನು ದೂಷಿಸುತ್ತಾರೆ
ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ಈ ಸಾವುಗಳಿಗೆ ಯುಎಸ್ ಅಧ್ಯಕ್ಷ ಜೋ ಬಿಡನ್ ಅವರನ್ನ ದೂಷಿಸಿದ್ದಾರೆ. ಮಾರಣಾಂತಿಕ ಮುಕ್ತ ಗಡಿ ನೀತಿಯಿಂದಾಗಿ ಈ ಸಾವುಗಳು ಸಂಭವಿಸಿವೆ ಎಂದು ಅಬಾಟ್ ಹೇಳಿದರು. ಆಂಟೋನಿಯೊ ನಗರದಲ್ಲಿ ಬೇಸಿಗೆಯ ತಿಂಗಳುಗಳಲ್ಲಿ ತಾಪಮಾನವು ಗಮನಾರ್ಹವಾಗಿ ಏರುತ್ತದೆ. ಸೋಮವಾರ ಇಲ್ಲಿ ತಾಪಮಾನ 39.4 ಡಿಗ್ರಿ ಸೆಲ್ಸಿಯಸ್ ಇತ್ತು.
ಸಂತ್ರಸ್ತರ ಪೌರತ್ವದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ ಎಂದು ಮೆಕ್ಸಿಕನ್ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾಡ್ ಹೇಳಿದ್ದಾರೆ.








