ಮೈಸೂರಿನಲ್ಲಿ ಊಟಿ ಮಾದರಿ ಗಾಜಿನ ಬಾಟಲ್ ಬಳಕೆಗೆ ಚಿಂತನೆ : S T SOMASHEKHAR
ಮೈಸೂರು : ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಊಟಿ ಮಾದರಿಯಲ್ಲಿ ಗಾಜಿನ ಬಾಟಲ್ ಬಳಕೆಗೆ ಚಿಂತನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂಸ್ಕೃತಿಕ ನಗರಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದು, ಅದೇ ರೀತಿ ಗಾಜಿನ ಬಾಟಲ್ ಬಳಕೆಗೆ ಚಿಂತನೆ ನಡೆದಿದೆ.
ಊಟಿ ಮಾದರಿಯ ಪ್ರಯೋಗವನ್ನು ಮೈಸೂರಿನಲ್ಲೂ ಮಾಡಲು ಚಿಂತನೆ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ತಿಳಿಯಲು ಮೈಸೂರು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳ ತಂಡವನ್ನು ಊಟಿಗೆ ಕಳುಹಿಸಿ ಅಲ್ಲಿ ಅಧ್ಯಯನ ನಡೆಸಲಾಗುವುದು.
ಬಳಿಕ ಮೈಸೂರಿನ ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬದಲಿಗೆ ಗಾಜಿನ ಬಾಟಲ್ ಬಳಸಲು ಚಿಂತನೆ ನಡೆಸಲಾಗಿದೆ ಎಂದು ಸೋಮಶೇಖರ್ ಹೇಳಿದ್ದಾರೆ.