ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಣಕೇಕೆ ಹಾಕುತ್ತಿದೆ. ಸಿಲಿಕಾಲ್ ಸಿಟಿಯಲ್ಲಿ ಕೊರೊನಾ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಬೆಂಗಳೂರು ಶಾಸಕರ ಸಹಕಾರ ಕೋರಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಶಾಸಕರ ಸಭೆ ಕರೆಯಲಾಗಿತ್ತು. ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ , ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಭಾಗಿಯಾಗಿದ್ದರು.
ಸಭೆ ಬಳಿಕ ಮಾತನಾಡಿದ ಬೆಂಗಳೂರು ಕೋವಿಡ್ ಉಸ್ತುವರಿ ಹಾಗೂ ಕಂದಾಯ ಸಚಿವ ಆರ್ ಅಶೋಕ್, ಕೊರೊನಾ ಜೊತೆ ನಾವು ಜೀವಿಸಬೇಕು . ಜೀವ ಮತ್ತು ಜೀವನ ಎರಡು ಮುಖ್ಯವಾಗಿದೆ. ಜೀವದ ಜೊತೆ ಜೀವನ ನಡೆಯಬೇಕಿದೆ ಹಾಗಾಗಿ ಲಾಕ್ ಡೌನ್ ಮಾಡುವುದಿಲ್ಲ. ಬೆಂಗಳೂರಿನಲ್ಲಿ ಸೋಂಕು ನಿಯಂತ್ರಣ ಮಾಡಲು ಪ್ರತಿ ವಾರ್ಡ್ ಗೆ 25 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
ಇನ್ನೂ ಖಾಸಗಿ ಆಸ್ಪತ್ರೆಗಳಲ್ಲಿ ಚೆಕ್ ಮಾಡಿಸಿದಾಗ ಕೊರೊನಾ ಟೆಸ್ಟ್ ಕೆಲವು ಕಡೆ ಸರಿಯಾಗ ಮಾಡುವುದಿಲ್ಲ. ಆದ್ದರಿಂದ ಸೋಂಕಿತರು ಕಾಯುವ ಪರಿಸ್ಥಿತಿ ಎದರುರಾಗಿತ್ತು. ಇದೀಗ ಅದನ್ನು ಸರಿಮಾಡಲು ತಯಾರಿ ನಡೆಸಿದ್ದೇವೆ. ಖಾಸಗಿ ಆಸ್ಪತ್ರೆಗಳು ಕೊರೊನಾ ಪಾಸಿಟಿವ್ ಕೇಸ್ ಇದ್ದರೆ ಅದನ್ನು ಆರೋಗ್ಯ ಅಧಿಕಾರಿಗೆ ತಿಳಿಸಬೇಕು. ರಾಜ್ಯದಲ್ಲಿ ಈವರೆಗೂ 5.53 ರಷ್ಟು ಸ್ಯಾಂಪಲ್ ಟೆಸ್ಟ್ ನಡೆಸಲಾಗಿದೆ.
ಊಟದ ಸಮಸ್ಯೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಊಟದ ಸಮಸ್ಯೆಯಿಲ್ಲ ಒಳ್ಳೆಯ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಊಟದ ಸಮಸ್ಯೆ ಬಂದರೆ. ನನಗೆ ಮತ್ತು ವಿಶ್ವನಾಥ್ ಅವರನ್ನು ಸಂಪರ್ಕ ಮಾಡಿದರೇ ನಾವು ಸಹಕರಿಸುತ್ತೇವೆ. ಕೊರೊನಾ ಚಿಕಿತ್ಸೆ ನೀಡಲು ಆಯುರ್ವೇದ ಔಷಧಿ ಬಳಕೆ ಸಲಹೆ ಬಂದಿದೆ. ಆಯುರ್ವೇದ ಔಷಧಿಯನ್ನು ಕೇರಳದಲ್ಲಿ ಬಳಕೆ ಮಾಡಲಾಗುತ್ತಿದೆ. ರಾಜ್ಯದಲ್ಲೂ ಬಳಕೆ ಮಾಡುವ ವಿಚಾರ ಚರ್ಚೆಯಲ್ಲಿ ಇದೆ ಎಂದು ಸಚಿವರು ಹೇಳಿದ್ದಾರೆ.








