ಭಾರತ್ ಜೋಡೋ ಯಾತ್ರೆಯಲ್ಲಿ KGF ಹಾಡಿನ ಬಳಕೆ – ರಾಹುಲ್ ಗಾಂಧಿ ವಿರುದ್ಧ FIR
ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯಲ್ಲಿ ಅನುಮತಿ ಇಲ್ಲದೆ ಕೆಜಿಎಫ್ ಚಿತ್ರದ ಹಿಂದಿ ಹಾಡನ್ನ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನಾಯಕ ರಾಹುಲ್ ಗಾಂಧಿ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ.
‘ಹಕ್ಕು ಸ್ವಾಮ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕು’ ಉಲ್ಲಂಘಿಸಿದ ಆರೋಪದಡಿ ಎಮ್.ಆರ್.ಟಿ ಸಂಸ್ಥೆಯು ಕಾನೂನು ಸಮರಕ್ಕೆ ಮುಂದಾಗಿದೆ. ಕಾಂಗ್ರೆಸ್ ಪಕ್ಷ ತಮ್ಮ ಸಂಸ್ಥೆಯ ಅನುಮತಿ ಇಲ್ಲದೇ, ಕೆಜಿಎಫ್ ಸಿನಿಮಾದ ಸಂಗೀತವನ್ನ ಬಳಸಿಕೊಂಡಿದ್ದಕ್ಕಾಗಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ.
आओ, तुम्हें ‘सपनों के भारत’ की ओर लेकर चलें…#BharatJodoYatra pic.twitter.com/4sZinLl8sS
— Congress (@INCIndia) October 11, 2022
ಕೆಜಿಎಫ್ ಸಿನಿಮಾದ ‘ಸುಲ್ತಾನಾ..’ ಹಾಡನ್ನು ಯಾತ್ರೆಯಲ್ಲಿ ಬಳಸಿದ್ದಕ್ಕಾಗಿ ಕೆಜಿಎಫ್ ಚಿತ್ರದ ಹಾಡುಗಳ ಪ್ರಸಾರ ಹಕ್ಕು ಹೊಂದಿರುವರ MRT ಸಂಸ್ಥೆಯು ರಾಹುಲ್ ಗಾಂಧಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಹಾಗೂ ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಜೈರಾಂ ರಮೇಶ್ ವಿರುದ್ಧ ದೂರು ದಾಖಲಿಸಿದೆ.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ Ipc 120b,403, 465, copyright act 63, IT acr , 66 ಅಡಿ FIR ದಾಖಲಿಸಲಾಗಿದೆ.
Use of KGF song in Bharat Jodo Yatra – FIR against Rahul Gandhi








