ಉತ್ತರ ಪ್ರದೇಶ – ವಾಕಿಂಗ್ ವೇಳೆ ಬಿಜೆಪಿಯ ಮುಖಂಡನ ಹತ್ಯೆ
ಬಾಗ್‌ಪತ್, ಅಗಸ್ಟ್ 11: ಉತ್ತರ ಪ್ರದೇಶದ ಸ್ಥಳೀಯ ಬಿಜೆಪಿಯ ಮುಖಂಡ ಮತ್ತು ಜಿಲ್ಲಾಧ್ಯಕ್ಷ ಸಂಜಯ್ ಖೋಖರ್ ಅವರನ್ನು ಮಂಗಳವಾರ ತಮ್ಮ ಜಮೀನಿನಲ್ಲಿ ಬೆಳಿಗ್ಗೆ ವಾಕಿಂಗ್ ಹೊರಟಾಗ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಬಿಜೆಪಿ ಮುಖಂಡ ಸಂಜಯ್ ಖೋಖರ್ ಅವರು ಬೆಳಿಗ್ಗೆ ತಮ್ಮದೇ ಜಮೀನಿನಲ್ಲಿ ವಾಕಿಂಗ್ ಹೊರಟಾಗ ಮೂವರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಹೊಲದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಜಯ್ ಖೋಖರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ ಅವರು ಬದುಕುಳಿಯಲಿಲ್ಲ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ. ಪೊಲೀಸರು ಕೇಸ್ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಈ ಘಟನೆ ಯುಪಿಯ ಬಾಗ್‌ಪತ್‌ನ ಚಪ್ರೌಲಿ ಪ್ರದೇಶದಲ್ಲಿ ನಡೆದಿದೆ. ಸಂಜಯ್ ಖೋಖರ್ ಹತ್ಯೆಯ ಬಗ್ಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಅಪರಾಧಿಗಳನ್ನು ಬಂಧಿಸಲು ತನಿಖೆಗೆ ಆದೇಶಿಸಿದ್ದಾರೆ.
ಸಂಜಯ್ ಖೋಖರ್ ಗುಂಡಿನ ದಾಳಿಯಿಂದ ರಕ್ತದ ಮಡುವಿನಲ್ಲಿ ಬಿದ್ದಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.








