ಚೀನಾಕ್ಕೆ ಅಘಾತ ನೀಡಿದ ಉತ್ತರ ಪ್ರದೇಶ ಸರ್ಕಾರ
ಲಕ್ನೋ, ಜುಲೈ 24: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಚೀನಾಕ್ಕೆ ದೊಡ್ಡ ಆಘಾತವನ್ನು ನೀಡಿದೆ. ಚೀನಾವನ್ನು ತೊರೆದು ಭಾರತದಲ್ಲಿ ಹೂಡಿಕೆ ಮಾಡಲು ಸಿದ್ಧವಾಗಿರುವ ಮಲ್ಟಿ ನ್ಯಾಷನಲ್ಸ್ ಕಂಪನಿಯನ್ನು ಸ್ವಾಗತಿಸುವ ಯೋಜನೆಯನ್ನು ಉತ್ತರ ಪ್ರದೇಶ ಸರ್ಕಾರ ಹಮ್ಮಿಕೊಂಡಿದೆ. ಉತ್ತರ ಪ್ರದೇಶ ಸರ್ಕಾರವು ಚೀನಾದಿಂದ ಆಮದನ್ನು ಕಡಿಮೆ ಮಾಡುವ ಯೋಜನೆಗಳನ್ನು ರೂಪಿಸಿದ್ದು ಈ ಉದ್ದೇಶದಿಂದ ಸರ್ಕಾರ 2 ವಾರಗಳಲ್ಲಿ ಟಾಯ್ ಪಾರ್ಕ್ ಯೋಜನೆಯನ್ನು ಪ್ರಾರಂಭಿಸಿದೆ.
ಮುಂದಿನ ಎರಡು ವಾರಗಳಲ್ಲಿ ಆಟಿಕೆಗಳ ತಯಾರಿಕೆಯನ್ನು ಉತ್ತೇಜಿಸುವ ಯೋಜನೆಯನ್ನು ಯಮುನಾ ಎಕ್ಸ್‌ಪ್ರೆಸ್ ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ವೈಇಡಿಎ) ಪ್ರಾರಂಭಿಸಿದೆ. ಉದ್ಯಾನಕ್ಕಾಗಿ 100 ಎಕರೆ ಭೂಮಿಯನ್ನು ಮೀಸಲಿಡಲು ವೈಇಡಿಎ ವಿವರಗಳನ್ನು ನೀಡಿದೆ. ಸೆಕ್ಟರ್ 33 ರಲ್ಲಿನ ಭೂ ಪ್ರದೇಶವನ್ನು ಉದ್ಯಾನವನ ಸ್ಥಾಪಿಸಲು ಮೀಸಲಿಡಲಾಗಿದೆ.
ಸುಮಾರು 50,000 ಜನರಿಗೆ ಈ ಮೂಲಕ ಉದ್ಯೋಗಾವಕಾಶ ಲಭಿಸಿ 4 ಲಕ್ಷ ಜನರಿಗೆ ಇದರಿಂದ ಪರೋಕ್ಷವಾಗಿ ಅನುಕೂಲವಾಗಲಿದೆ.
ವರದಿಗಳ ಪ್ರಕಾರ ಚೀನಾದಿಂದ ಸುಮಾರು 2500 ಕೋಟಿ ರೂಪಾಯಿ ಆಟಿಕೆಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಹಿಂದಿನ ಸರ್ಕಾರ ಗೊಂಬೆಗಳ ಆಮದು ಸುಂಕವನ್ನು 20% ರಿಂದ 60% ಕ್ಕೆ ಹೆಚ್ಚಿಸಿದೆ. ರಾಜ್ಯದಲ್ಲಿ ಚೀನಾದ ವಿದ್ಯುತ್ ಮೀಟರ್ ಮತ್ತು ಉಪಕರಣಗಳ ಸ್ಥಾಪನೆಯನ್ನು ನಿಷೇಧಿಸಲು ಯೋಗಿ ಸರ್ಕಾರ ಈ ಹಿಂದೆ ನಿರ್ಧರಿಸಿದೆ.