Uttar Pradesh : ವರದಕ್ಷಿಣೆ ತರದ ಸೊಸೆಗೆ ಆಸಿಡ್ ಕುಡಿಸಿ ಅತ್ತೆ – ಮಹಿಳೆ ಸಾವು….
ವರದಕ್ಷಿಣೆ ನೀಡದಕ್ಕೆ ಅತ್ತೆಯೊಬ್ಬಳು ಸೊಸೆಗೆ ಆಸಿಡ್ ಕುಡಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡದಿದೆ. ಬಿತ್ರಿ ಚೈನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಉಡಾಲ ಜಾಗೀರ್ ಗ್ರಾಮದ ನಿವಾಸಿ 24 ವರ್ಷದ ಅಂಜುಮ್ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸದ್ದಾರೆ.
ಸಾವಿಗೂ ಕೆಲ ಗಂಟೆಗಳ ಮೊದಲು ಮ್ಯಾಜಿಸ್ಟ್ರೇಟ್ ಮುಂದೆ ಮಹಿಳೆ ತನ್ನ ಹೇಳಿಕೆಯನ್ನ ದಾಖಲಿಸಿದ್ದಾರೆ. ತನ್ನ ಪೋಷಕರು 2.50 ಲಕ್ಷ ರೂಪಾಯಿ ನಗದು ಮತ್ತು ಕಾರಿನ ಬೇಡಿಕೆಯನ್ನ ಪೂರೈಸಲು ವಿಫಲವಾದ ಕಾರಣ ತನ್ನ ಅತ್ತೆಯಂದಿರು ಆಸಿಡ್ ಕುಡಿಯಲು ಒತ್ತಾಯಿಸಿದರು ಎಂದು ಮಹಿಳೆ ಹೇಳಿದ್ದಾಳೆ.
ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ, ಐಪಿಸಿ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ನವಾಬ್ಗಂಜ್ ಪೊಲೀಸ್ ಠಾಣೆಯಲ್ಲಿ ಆಕೆಯ ಪತಿ ಮತ್ತು ಅತ್ತೆಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬರೇಲಿ (ಗ್ರಾಮೀಣ) ಪೊಲೀಸ್ ಅಧೀಕ್ಷಕ ರಾಜ್ಕುಮಾರ್ ಅಗರ್ವಾಲ್ ಮಾತನಾಡಿ, ಇದು ಗಂಭೀರ ವಿಷಯವಾಗಿದೆ ಮತ್ತು ನವಾಬ್ಗಂಜ್ ಮತ್ತು ಬಿತ್ರಿ ಚೈನ್ಪುರ್ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಆರು ವರ್ಷಗಳ ಹಿಂದೆ ಉಡಾಲ ಜಾಗೀರ್ ಗ್ರಾಮದ ಇಲಿಯಾಸ್ ಎಂಬಾತನನ್ನ ಅಂಜುಮ್ ಮದುವೆಯಾಗಿದ್ದಳು. 15 ದಿನಗಳ ಹಿಂದೆ ಅಂಜುಮ್ ತನ್ನ ಪೋಷಕರ ಮನೆಗೆ ಭೇಟಿ ನೀಡಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಮತ್ತು 2.50 ಲಕ್ಷ ರೂಪಾಯಿ ನಗದು ಮತ್ತು ಕಾರು ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ತಿಳಿಸಿದ್ದಾಳೆ ಎಂದು ಆಕೆಯ ಸಹೋದರಿ ಹೇಳಿದ್ದಾರೆ.
ಫೆಬ್ರವರಿ 21 ರಂದು ಆಕೆಯ ಕುಟುಂಬಸ್ಥರಿಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಕುಟುಂಬಸ್ಥರು ಭೇಟಿ ನೀಡಿದಾಗ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಯನ್ನು ಬೇರೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
mother in law makes daughter in law drink acid for dowry