ಕಾಡುಪ್ರಾಣಿಗಳಿಗೆ ಇಟ್ಟಿದ್ದ ವಿಷದ ಅನ್ನ ತಿಂದು ಜಾನುವಾರುಗಳು ಸಾವು ….
ಕಾಡುಪ್ರಾಣಿಗಳ ಕಾಟ ತಪ್ಪಿಸಲು ತೋಟದಲ್ಲಿ ವಿಷ ಬೆರೆಸಿಸಿಟ್ಟಿದ್ದ ಅನ್ನ ತಿಂದು ಐದು ಜಾನುವಾರುಗಳು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ನಾಗೋಡಾದಲ್ಲಿ ನಡೆದಿದೆ.
ಕಾಡುಪ್ರಾಣಿಗಳ ಕಾಟ ತಪ್ಪಿಸಲು ತೋಟದಲ್ಲಿ ವಿಷ ಬೇರಸಿದ ಅನ್ನ ಇಟ್ಟಿದ್ದರು. ಆದರೇ, ಮಮತಾ ಮಹಾಬಲೇಶ್ವರ ಗಾಳಕರ ಎಂಬುವವರಿಗೆ ಸೇರಿದ ಜಾನುವಾರುಗಳು ಬಂದು ವಿಷ ಮಿಶ್ರಿತ ಅನ್ನವನ್ನ ತಿಂದಿವೆ. ಪರಿಣಾಮ ಐದು ಜಾನುವಾರುಗಳು ಮೃತಪಟ್ಟಿದ್ದು,, ಏಳು ಗೋವುಗಳು ಅಸ್ವಸ್ಥಗೊಂಡಿವೆ. ಅನಂತ ನರಸಿಂಹ ಭಾಗ್ವತ್ ಎಂಬುವವರ ತೋಟದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಷಪ್ರಾಷನದಿಂದ ಒಟ್ಟು ನಾಲ್ಕು ಎತ್ತು ಮತ್ತು ಒಂದು ಆಕಳು ಸಾವನ್ನಪ್ಪಿವೆ. ಜೀವನಕ್ಕೆ ಆಧಾರವಾಗಿದ್ದ ಜಾನುವಾರುಗಳನ್ನು ಕಳೆದುಕೊಂಡು ಮಾಲೀಕರು ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಜೊಯಿಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತೋಟದ ಮಾಲೀಕರನ್ನು ವಿಚಾರಣೆ ನಡೆಸಿದ್ದಾರೆ. ಕಾಡುಪ್ರಾಣಿಗಳ ಕಾಟಕ್ಕೆ ಈ ರೀತಿ ವಿಷ ಇಡುವುದು ಮಹಾ ಅಪರಾಧ.
Uttara kannada: 2 cows and 1 bull died, 7-cows got sick in Joida








