Uttara Kannada | ಪೀಠೋಪಕರಣ ಮಳಿಗೆಯಲ್ಲಿ ಬೆಂಕಿ.. ವಸ್ತುಗಳು ಸುಟ್ಟು ಭಸ್ಮ
ಕಾರವಾರ : ಆಕಸ್ಮಿಕ ಬೆಂಕಿ ತಗುಲಿ ಪೀಠೋಪಕರಣ ತಯಾರಿಕಾ ಮಳಿಗೆಯಲ್ಲಿದ್ದ ಕೋಟ್ಯಾಂತರ ರೂಪಾಯಿ ಬೆಲೆಯ ಪೀಠೋಪಕರಣಗಳು ಸುಟ್ಟು ಭಸ್ಮವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಉದಯ ನಾಯ್ಕ ಅವರಿಗೆ ಸೇರಿದ ಪೀಠೋಪಕರಣ ತಯಾರಿಕಾ ಮಳಿಗೆ ಇದಾಗಿದೆ.

ಇಂದು ಬೆಳಿಗ್ಗೆ ಮಳಿಗೆಗೆ ಬೆಂಕಿ ತಗುಲಿದೆ. ಈ ವೇಳೆ ಬೆಂಕಿಯ ಕೆನ್ನಾಲಿಗೆಗೆ ಮಳಿಗೆಯಲ್ಲಿದ್ದ ಪೀಠೋಪಕರಣಗಳು ಸುಟ್ಟು ಭಸ್ಮವಾಗಿವೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಬೆಂಕಿಯನ್ನು ನಂದಿಸಿದ್ದಾರೆ.








