“ಮಾಂಸ ನಿಷೇಧ ಮೂಲಭೂತ ಹಕ್ಕಿಗೆ ಸಂಬಂಧಿಸಿದ ವಿಚಾರ” – ಉತ್ತರಾಖಂಡ ಹೈಕೋರ್ಟ್
ಉತ್ತರಾಖಂಡ : ಹರಿದ್ವಾರದಲ್ಲಿ ವಧಾಲಯಗಳನ್ನು ನಿಷೇಧಿಸುವ ಕ್ರಮದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿರುವ ಉತ್ತರಾಖಂಡ ಹೈಕೋರ್ಟ್ ಮಾಂಸ ನಿಷೇಧ ಮೂಲಭೂತ ಹಕ್ಕಿಗೆ ಸಂಬಂಧಿಸಿದ ವಿಚಾರ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಶೇಕಡ 70ಕ್ಕಿಂತಲೂ ಅಧಿಕ ಮಂದಿ ಮಾಂಸಾಹಾರ ಸೇವಿಸುತ್ತಿದ್ದು, ಇದರಿಂದ ಮಾಂಸ ನಿಷೇಧಿಸುವ ವಿಚಾರ ನಾಗರಿಕರ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ್ದಾಗುತ್ತದೆ, ಇದು ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಿನ ವಿಚಾರವಲ್ಲ ಎಂದು ತಿಳಿಸಿದೆ. ಈ ಸಂಬಂಧ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಮತ್ತು ನ್ಯಾಯಮೂರ್ತಿ ಅಲೋಕ್ ಕುಮಾರ್ ವರ್ಮಾ ಅವರನ್ನೊಳಗೊಂಡ ಪೀಠವು , ‘ ಇದು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಿನ ವ್ಯಾಜ್ಯವಲ್ಲ. ಭಾರತದ ನಾಗರಿಕರ ಮೂಲಭೂತ ಹಕ್ಕುಗಳೇನು..? ಎಂದು ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಅರ್ಜಿಯಲ್ಲಿ ಸೂಕ್ತ ತಿದ್ದುಪಡಿ ಮಾಡುವಂತೆ ನ್ಯಾಯಪೀಠ ಅರ್ಜಿದಾರರಿಗೆ ಸಲಹೆ ಮಾಡಿತ್ತು. ವಧಾಲಯಗಳ ನಿಷೇಧ ನಾಗರಿಕರ ಖಾಸಗಿತನದ ಉಲ್ಲಂಘನೆ ಎಂಬ ವಿಚಾರವನ್ನು ಯಾವ ಅರ್ಜಿದಾರರೂ ಮನವಿಯಲ್ಲಿ ಪ್ರಸ್ತಾವಿಸಿಲ್ಲ. ಅರ್ಜಿಯ ಕರಡನ್ನು ಪೂರ್ಣಶ್ರದ್ಧೆಯಿಂದ ಸಿದ್ಧಪಡಿಸಿಲ್ಲ. ಗಂಭೀರ ಪರಿಣಾಮ ಬೀರಬಹುದಾದ ಸಂವಿಧಾನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಶ್ನಿಸುವ ಅರ್ಜಿಗಳಲ್ಲಿ ಇದು ಅಗತ್ಯ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಹರಿದ್ವಾರದಲ್ಲಿ ವಧಾಲಯಗಳನ್ನು ನಿಷೇಧಿಸಿರುವುದು ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯ ಎಂದು ಅರ್ಜಿದಾರರು ಹೇಳಿದ್ದರು. 2018 ಮತ್ತು 2019ರ ಆಹಾರ ಹವ್ಯಾಸ ಸಮೀಕ್ಷೆಯನ್ನು ಉಲ್ಲೇಖಿಸಿದ ನ್ಯಾಯಪೀಠ, ಉತ್ತರಾಖಂಡದಲ್ಲಿ ಶೇಕಡ 72.6ರಷ್ಟು ಮಂದಿ ಮಾಂಸಾಹಾರಿಗಳು. ದೇಶದಲ್ಲಿ ಒಟ್ಟಾರೆ 70% ಮಂದಿ ಮಾಂಸಾಹಾರಿಗಳಿದ್ದು, ಬಹುತೇಕ ಭಾರತೀಯರು ಸಸ್ಯಾಹಾರಿ ಗಳು ಎಂಬ ನಂಬಿಕೆಯನ್ನು ಇದು ಅಲ್ಲಗಳೆದಿದೆ ಎಂದು ಹೇಳಿದೆ.
ಉದ್ಯೋಗಿಗಳೇ ಗಮನಿಸಿ – ಆಗಸ್ಟ್ 1 ರಿಂದ ಸಿಗಲಿದೆ ಈ ವಿಶೇಷ ಸೌಲಭ್ಯಗಳು..!
ಲಸಿಕೆ ಅಭಿಯಾನಕ್ಕೆ ಇದುವರೆಗೂ ಒಟ್ಟಾರೆಯಾಗಿ ಖರ್ಚಾಗಿರೋದೆಷ್ಟು ಗೊತ್ತಾ..?
ಮಕ್ಕಳಿಗೆ ಕೊರೊನಾ ಲಸಿಕೆ ಯಾವಾಗ..? ಉತ್ತರ ಕೊಟ್ಟ ಏಮ್ಸ್ ನಿರ್ದೇಶಕರು…!
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








