ಉತ್ತರಖಂಡದಲ್ಲಿ ಮತ್ತೊಂದು ಭೂಕುಸಿತ ದುರಂತ – ಐವರು ಸಾವು, ಹಲವರು ನಾಪತ್ತೆ..!
ಉತ್ತರಖಂಡ: ಉತ್ತರಖಂಡದಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ ಹಿಮಸ್ಪೋಟ, ಭೂಕುಸಿತದ ಘಟನೆಗಳಲ್ಲಿ ಅನೇಕರು ಜೀವ ಕಳೆದುಕೊಂಡ ಕರಾಳ ನೆನಪು ಮಾಸುವಷ್ಟರಲ್ಲೇ ಮತ್ತೊಮ್ಮೆ ಭೂ ಕುಸಿತ ಸಂಭವಿಸಿದೆ.. ಘಟನೆಯಲ್ಲಿ ಸುಮಾರು ಐವರು ಮೃತಪಟ್ಟಿದ್ರೆ, 5 ಕ್ಕಿಂತ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.. ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.
https://twitter.com/i/status/1432207785224130567
ಉತ್ತರಾಖಂಡದ ಪಿಥೋರಗಡ್ ಜಿಲ್ಲೆಯ ಜುಮ್ಮಾ ಗ್ರಾಮದಬಳಿ ಭೂಕುಸಿತವಾಗಿದೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ರಾಜ್ಯ ವಿಪತ್ತು ನಿಗ್ರಹ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.








