ಉತ್ತರ ಪ್ರದೇಶದಲ್ಲಿ 2 ವರ್ಷದ ಮಗುವಿಗೆ ರೂಪಾಂತರಿ ಕೊರೊನಾ ಸೋಂಕು
ಲಕ್ನೋ: ಬ್ರಿಟನ್ ನಿಂದ ಭಾರತಕ್ಕೆ ರೂಪಾಂತರಿ ಕೊರೊನಾ ವೈರಸ್ ಎಂಟ್ರಿಯಾಗಿದ್ದು, ಈಗಾಗಲೇ 20 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಹೀಗಿರುವಾಗಲೇ ಪ್ರದೇಶದಲ್ಲಿರುವ 2 ವರ್ಷದ ಮಗುವಿಗೆ ರೂಪಾಂತರಿ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಮೂಲಕ ಭಾರತದಲ್ಲಿ ಕೊರೊನಾ 2 ನೇ ಅಲೆ ನಿಧಾನಗತಿಯಲ್ಲಿ ಶುರುವಾಗಿದ್ದು, ಸುಮಾನಿಯಂತೆ ಅಬ್ಬರಿಸುವ ಸಾಧ್ಯತೆಯಿದೆ.
ಬ್ರಿಟನ್ ವೈರಸ್ | ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ವಿಸ್ತರಣೆ
ಇನ್ನೂ ಮಗು ಹಾಗೂ ಪೋಷಕರಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಡಿಸೆಂಬರ್ 14 ರಂದು ಲಂಡನ್ ನಿಂದ ಮಗು ಹಾಗೂ ಮಗುವಿನ ತಾಯಿ, ತಂದೆ ಮೀರತ್ ಗೆ ಆಗಮಿಸಿದ್ದರು. ಮೂವರನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಮತ್ತಷ್ಟು ಪರೀಕ್ಷೆ ನಡೆಸಿದಾಗ ಮೂವರಲ್ಲೂ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿರುವುದು ತಿಳಿದುಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel